newsics.com
ಬೆಂಗಳೂರು: ಕೊಲ್ಲಿ ರಾಷ್ಟ್ರಗಳಿಂದ ಅಕ್ರಮವಾಗಿ ಸಾಗಿಸುತ್ತಿದ್ದ 1.836 ಕೆಜಿ ಚಿನ್ನವನ್ನು ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಇದರ ಮೌಲ್ಯ 94.02 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ವಿಮಾನ ನಿಲ್ದಾಣ ಪ್ರವೇಶ ದ್ವಾರದಲ್ಲಿ ನಿಲ್ದಾಣ ಕಸ್ಟಮ್ಸ್ ವಿಭಾಗದ ವಾಯು ವಿಚಕ್ಷಣ ದಳ ಘಟಕವು ಈ ಕಾರ್ಯಾಚರಣೆ ನಡೆಸಿದೆ.
ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಆಗಮಿಸಿದ ಕೊಡಗು ಮೊಹಮದ್, ಹೊನ್ನಾವರ ಮೂಲದ ಮೊಹಮ್ಮದ್ ಅಶ್ರಫ್ ಎಂಬುವರಿಂದ ಅತಿ ದೊಡ್ಡ ಪ್ರಮಾಣದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಿನ್ನವನ್ನು ಪುಡಿ ಮಾಡಿ ಪೇಸ್ಟ್‌ನಿಂದ ಮುಚ್ಚಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಹಾಸನಾಂಬೆ ದೇಗುಲದ ಸ್ವಾಗತ ಕಮಾನು ಭಗ್ನ
5ಲಕ್ಷ ವಲಸೆ ಭಾರತೀಯರಿಗೆ ಅಮೆರಿಕ ಪೌರತ್ವ: ಜೋ ಬೈಡನ್ ಭರವಸೆ
ಗುಂಡಿನ ಚಕಮಕಿ; ಸೇನಾಧಿಕಾರಿ ಸೇರಿ 4 ಯೋಧರು ಹುತಾತ್ಮ, 3 ಉಗ್ರರ ಹತ್ಯೆ
ಕರ್ನಾಟಕ ಮೂಲದ ಡಾ.ವಿವೇಕ್ ಮೂರ್ತಿಗೆ ಅಮೆರಿಕದ ಕೊರೋನಾ ಟಾಸ್ಕ್’ಫೋರ್ಸ್‌ನಲ್ಲಿ ಸ್ಥಾನ?