Friday, September 30, 2022

ಮಗಳನ್ನು ಕೊಂದು ತಾನೂ ನೇಣಿಗೆ ಶರಣಾದ ದಂತ ವೈದ್ಯೆ

Follow Us

newsics.com

ಬೆಂಗಳೂರು: ತನ್ನ 9 ವರ್ಷದ ಮಗಳನ್ನು ನೇಣು ಬಿಗಿದು ಕೊಂದ ದಂತ ವೈದ್ಯೆಯೊಬ್ಬರು ನೇಣಿಗೆ ಶರಣಾಗಿದ್ದಾರೆ.

ಬೆಂಗಳೂರು ಬನಶಂಕರಿಯ ಕಾವೇರಿನಗರದ ಕೃಷ್ಣಾ ಗ್ರಾಂಡ್ ಬಳಿ ಈ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ದಂತ ವೈದ್ಯೆ
ಶೈಮಾ ಮುತ್ತಪ್ಪ ಅವರು ತನ್ನ ಮಗಳು ಆರಾಧನಾ (9)ನೇಣು ಬಿಗಿದು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂರು ದಿನಗಳ ಹಿಂದೆಯೇ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಲ್ಲದೆ ಈ ಆತ್ಮಹತ್ಯೆ ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಳೆದ 10 ವರ್ಷದ ಹಿಂದೆ ದಂತ ವೈದ್ಯ ತರಬೇತಿಯ ವೇಳೆ ನಾರಾಯಣ್ ಎಂಬುವರನ್ನು ಪ್ರೀತಿಸಿ ಶೈಮಾ ಮುತ್ತಪ್ಪ ವಿವಾಹವಾಗಿದ್ದರು.
ಪ್ರೇಮಾ ಅವರ ಪ್ರೇಮದ ವಿಚಾರ ಕುಟುಂಬಕ್ಕೆ ತಿಳಿದ ಸಂದರ್ಭದಲ್ಲೇ ಶೈಮಾ ತಾಯಿ ಸಹ ಮೃತಪಟ್ಟಿದ್ದರು.
ಪತಿ ನಾರಾಯಣ್ ಕ್ಲಿನಿಕ್‌ಗೆ ತೆರಳಿದ್ದಾಗ ಈ‌ ಘಟನೆ ನಡೆದಿದೆ. ಮೃತ ಶೈಮಾ ಸಹೋದರ ಆಸ್ಟ್ರೇಲಿಯಾದಲ್ಲಿದ್ದಾರೆ. ಸೋಮವಾರ ಸಹೋದರ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಬನಶಂಕರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಯಾಂಡಲ್‌ವುಡ್ ನವ ನಾಯಕಿ ವಿರುದ್ಧ ಭುಗಿಲೆದ್ದ ವಿವಾದ, ಮಾಲಾಶ್ರೀ ಹೇಳಿಕೆಗೆ ಆಕ್ರೋಶ

ಪಬ್ ನಲ್ಲಿ ಗಲಾಟೆ ಆರೋಪ: ಸುನಾಮಿ ಕಿಟ್ಟಿ ವಿರುದ್ಧ ದೂರು

ತಮಿಳು ಸ್ಟಾರ್ ನಟಿ ಆತ್ಮಹತ್ಯೆಗೆ ಯತ್ನ: ಆಸ್ಪತ್ರೆಗೆ ದಾಖಲು

ಮತ್ತಷ್ಟು ಸುದ್ದಿಗಳು

vertical

Latest News

ಉಕ್ರೇನ್‌ನ 4 ಪ್ರದೇಶಗಳು ರಷ್ಯಾ ವಶ- ಒಪ್ಪಂದಕ್ಕೆ ಸಹಿ ಹಾಕಿದ ಪುಟಿನ್‌!

newsics.com ರಷ್ಯಾ: ಉಕ್ರೇನ್‌ನ ನಾಲ್ಕು ರಾಜ್ಯಗಳನ್ನು ಅಧಿಕೃತವಾಗಿ ರಷ್ಯಾ ಸುಪರ್ದಿಗೆ ತೆಗೆದುಕೊಂಡಿದೆ. ರಷ್ಯಾ ಇಂದು ಉಕ್ರೇನ್‌ನ 4 ರಾಜ್ಯಗಳನ್ನು ತನ್ನ ಭೂಪ್ರದೇಶದಲ್ಲಿ ಸೇರಿಸಿದೆ. ಈ ಪ್ರದೇಶಗಳು ಡೊನೆಟ್ಸ್ಕ್,...

ವಂದೇ ಭಾರತ್ ಪ್ರಯಾಣ ಮಾಡಿದ್ರೆ ವಿಮಾನಕ್ಕಿಂತ ರೈಲಿಗೆ ಆದ್ಯತೆ ನೀಡುತ್ತಾರೆ: ಮೋದಿ

newsics.com ಗಾಂಧಿನಗರ: ಒಮ್ಮೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿದರೆ ವಿಮಾನದಲ್ಲಿ ಪ್ರಯಾಣಿಸುವುದನ್ನೇ ಜನರು ನಿಲ್ಲಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಾಂಧಿನಗರದ ರೈಲು ನಿಲ್ದಾಣದಲ್ಲಿ ಹೊಸ ವಂದೇ ಭಾರತ್ ರೈಲಿಗೆ ಚಾಲನೆ ನೀಡಿ ಬಳಿಕ...

ಕಲಾ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ ಇನ್ನಿಲ್ಲ

newsics.com ಮೈಸೂರು: ಖ್ಯಾತ ಕಲಾ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ ಶುಕ್ರವಾರ ನಿಧನರಾದರು. ವೀಣೆ ಶೇಷಣ್ಣ ಅವರ ವಂಶದಲ್ಲಿ ಜನಿಸಿದ್ದ ಮೈಸೂರು ವಿ. ಸುಬ್ರಹ್ಮಣ್ಯ ಅವರು ಸಹಜವಾಗಿಯೇ ಸಂಗೀತಾಸಕ್ತಿ ಹೊಂದಿದ್ದರು. ಮೈಸೂರು ವಿ. ಸುಬ್ರಹ್ಮಣ್ಯ ಅವರ...
- Advertisement -
error: Content is protected !!