newsics.com
ಬೆಂಗಳೂರು: ವೈದ್ಯರ ವೇತನ ಪರಿಷ್ಕರಣೆ ಬೇಡಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದರಿಂದ ವೈದ್ಯರು ಮುಷ್ಕರ
ಸ್ಥಗಿತಗೊಳಿಸಲು ಮುಂದಾಗಿದ್ದಾರೆ.
ಪ್ರತಿಭಟನಾನಿರತ ವೈದ್ಯರ ಜತೆ ಶುಕ್ರವಾರ ನಡೆದ ಸಭೆ ಯಶಸ್ವಿಯಾಗಿದ್ದು, ವೈದ್ಯರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಗೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಟ್ವೀಟ್’ನಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸೆ.21ರಿಂದ ಶಾಲೆ ಮಾತ್ರ ಓಪನ್, ಕ್ಲಾಸ್ ಇರಲ್ಲ
ವೇತನ ಪರಿಷ್ಕರಣೆಗೆ ಸರ್ಕಾರ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿ ಇದೇ ಸೆ.15 ರಿಂದ ಸರ್ಕಾರಿ ವೈದ್ಯರು ಅಸಹಕಾರ ಚಳವಳಿ ಆರಂಭಿಸಿದ್ದರು. ಶುಕ್ರವಾರ ಸರ್ಕಾರ ಹಾಗೂ ವೈದ್ಯರ ನಡುವೆ ನಡೆದ ಸಂಧಾನ ಸಭೆಯಲ್ಲಿ ಒಮ್ಮತ ಅಭಿಪ್ರಾಯಕ್ಕೆ ಬರಲಾಗಿದ್ದು, ಮುಷ್ಕರ ಕೈಬಿಡಲು ವೈದ್ಯ ಸಂಘಟನೆಗಳು ಒಪ್ಪಿಗೆ ಸೂಚಿಸಿವೆ.
ಚೀನಾದಲ್ಲಿ ಹೊಸ ವೈರಸ್: ಪುರುಷರನ್ನು ನಪುಂಸಕರನ್ನಾಗಿ ಮಾಡುತ್ತಿದೆ ಸೂಕ್ಷ್ಮ ಜೀವಿ
ಕುವೆಂಪು ವಿವಿ ಆವರಣದಲ್ಲಿ ಡಿಆರ್ಡಿಓ ಸಂಶೋಧನಾ ಘಟಕ ಸ್ಥಾಪನೆಗೆ ಕೇಂದ್ರ ಒಪ್ಪಿಗೆ
ನಟ ಸುಶಾಂತ್ ಸಾವು ಪ್ರಕರಣ; ಎನ್’ಸಿಬಿಯಿಂದ ನಾಲ್ವರ ಬಂಧನ, ಡ್ರಗ್ಸ್ ವಶ