ಕಾರವಾರ: ಕೊರೋನಾ ಎಫೆಕ್ಟ್ ನಿಂದ ಕಂಗೆಟ್ಟ ರಾಜಕಾರಣಿಯ ಕುಟುಂಬವೊಂದು ಆನ್’ಲೈನ್’ನಲ್ಲೇ ಸರಳ ವಿವಾಹ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ರಾಜಕಾರಣಿ ಜುಕಾಕೋ ಶಂಶುದ್ದೀನ್ ಅವರ ಮೊಮ್ಮಗ ಮೊಹಮ್ಮದ್ ಆದಿಲ್ ಕೌಡ್ ಹೀಗೆ ಆನ್ ಲೈನ್ ನಲ್ಲೇ ಮದುವೆಯಾದ ವ್ಯಕ್ತಿ. ಈತ ಮಾಲ್ಡಿವ್’ನಲ್ಲಿ ಪೈಲಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಲಾಕ್ ಡೌನ್ ಮೊದಲು ಮಾಲ್ಡಿವ್’ನಲ್ಲೇ ಪೈಲಟ್ ಆಗಿರುವ ತಮ್ಮ ತಂದೆ ಹಾಗೂ ತಾಯಿಯೊಂದಿಗೆ ಉಮ್ರಾ ನಡೆಸಲು ಬೆಂಗಳೂರಿಗೆ ಬಂದಿದ್ದರು. ಆದರೆ ಲಾಕ್ ಡೌನ್ ಜಾರಿಯಾಗಿದ್ದರಿಂದ ಇಲ್ಲೇ ಉಳಿಯುವಂತಾಗಿತ್ತು.
ಮೊಹಮ್ಮದ್ ಆದಿಲ್ ವಿವಾಹ ಚೆನೈ ನ ಅಂಬೂರಿನ ಆಫಿಯಾ ಮರಿಯಮ್ ಅವರೊಂದಿಗೆ ನಿಶ್ಚಯವಾಗಿತ್ತು. ಆದರೆ ಈ ಕರ್ಪ್ಯೂ ಹಾಗೂ ಲಾಕ್ ಡೌನ್, ಕೊರೋನಾ ಎಫೆಕ್ಟ್ ನಿಂದ ಎಲ್ಲ ಸಂಬಂಧಿಕರು ಒಂದೆಡೆ ಸೇರೋದು ಕಷ್ಟವಾಗೋದರಿಂದ ಮೊಹಮ್ಮದ್ ಕೆಲವೇ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಲು ನಿರ್ಧರಿಸಿದ್ದು ಖಾಜಿಯವರನ್ನು ಮನೆಗೆ ಆಹ್ವಾನಿಸಿ ಕೆಲವೇ ಆಪ್ತರ ಸಮ್ಮುಖದಲ್ಲಿ ಮೊಹಮ್ಮದ್ ಸರಳವಾಗಿ ಜುಲೈ 24 ರಂದು ವಿವಾಹವಾಗಿದ್ದಾರೆ.
ಎರಡು ಕುಟುಂಬದ ಸದಸ್ಯರು ಸಿಸ್ಕೋ ಆ್ಯಪ್ಮೂಲಕ ಮದುವೆಯನ್ನು ಲೈವ್ ವೀಕ್ಷಿಸಿದ್ದಾರೆ. ಒಟ್ಟಿನಲ್ಲಿ ಕೊರೋನಾ ಎಫೆಕ್ಟ್ ಮದುವೆಯ ಮೇಲೆ ಕರಿನೆರಳು ಬೀರಿದ್ದು ಜನರು ಅದಕ್ಕೂ ಆನ್ ಲೈನ್ ಮೊರೆ ಹೋಗುವಂತಾಗಿದೆ.
ಅನ್ ಲೈನ್ ವಿವಾಹದಿಂದ ಸಂಭ್ರಮಕ್ಕೂ ಕುಂದಿಲ್ಲ. ಜತೆಗೆ ರೋಗ ಹರಡುವ ಭಯವೂ ಇಲ್ಲ. ಇದರಿಂದ ಹಣ ಮತ್ತು ಸಮಯವೂ ಉಳಿತಾಯವಾಗುತ್ತದೆ ಅಂತ ಪ್ರತಿಕ್ರಿಯಿಸಿದ್ದಾರೆ ಮೊಹಮ್ಮದ್ ಆದಿಲ್ ಕೌಲ್.
ಆನ್’ಲೈನ್’ನಲ್ಲೇ ವಿವಾಹವಾದ ಕನ್ನಡಿಗ ಪೈಲಟ್
Follow Us