newsics.com
ಮಂಡ್ಯ: ಜಮೀನು ವಿವಾದ ಪ್ರಕಣದಲ್ಲಿ ತೀರ್ಪು ತನ್ನ ವಿರುದ್ಧವಾಗಿ ಬಂದಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಸಂಬಂಧಿಕನನ್ನೇ ಕುಡುಗೋಲಿನಿಂದ 40ಕ್ಕೂ ಹೆಚ್ಚು ಬಾರಿ ಹಲ್ಲೆ ಮಾಡಿದ್ದಾನೆ.
ನಂದನ್ ಎನ್ನುವ ವ್ಯಕ್ತಿ ಚೆನ್ನರಾಜ್ ಮೇಲೆ ಕುಡುಗೋಲಿನಿಂದ ದಾಳಿ ಮಾಡಿದ್ದು, ಇದೀಗ ನಂದನ್ ಸ್ಥಿತಿ ಗಂಭೀರವಾಗಿದೆ. ಮಂಡ್ಯ ಹಲ್ಲೆಗೊಳಗಾದ ಚೆನ್ನಾರಾಜು ಹಾಗೂ ನಂದನ್ ಇಬ್ಬರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮರಳಿಗ ಗ್ರಾಮದ ನಿವಾಸಿಗಳು.
ಜಮೀನು ವ್ಯಾಜ್ಯ ಪ್ರಕರಣ ಮದ್ದೂರು ತಾಲೂಕು ಕಚೇರಿಯಲ್ಲಿ ಚೆನ್ನರಾಜ್ ಪರ ತೀರ್ಪು ಬರುತ್ತಿದ್ದಂತೆ ನಂದನ್ ಕುಪಿತಗೊಂಡಿದ್ದಾನೆ. ಬಳಿಕ ಅಲ್ಲೇ ತಾಲೂಕು ಕಚೇರಿಯಲ್ಲೇ ಕ್ಷಣ ಮಾತ್ರದಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ ಚೆನ್ನರಾಜ್ ಮೇಲೆ ಕುಡುಗೋಲಿನಿಂದ 40ಕ್ಕೂ ಹೆಚ್ಚು ಬಾರಿ ಹಲ್ಲೆ ಮಾಡಿದ್ದಾನೆ.