newsics.com
ಸಕಲೇಶಪುರ(ಹಾಸನ): ತನ್ನ ಹಣೆಗೆ ಗುಂಡು ಹೊಡೆದುಕೊಂಡು ವ್ಯಕ್ತಿಯೊಬ್ಬರು ಗುರುವಾರ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಸಮೀಪದ ಬನವಾಸೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬಸವಲಿಂಗಪ್ಪ (71) ಮೃತಪಟ್ಟವರು. ಗುರುವಾರ ಸಂಜೆ ಮನೆಯಲ್ಲಿ ಬಂದೂಕಿನಿಂದ ತಮ್ಮ ಹಣೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಮಯದಲ್ಲಿ ಮೃತರ ಪತ್ನಿ ಮನೆಯ ಹೊರಗಡೆ ಇದ್ದರೆನ್ನಲಾಗಿದೆ. ಗುಂಡು ಹಾರಿದ ರಭಸಕ್ಕೆ ಬಸವಲಿಂಗಪ್ಪ ತಲೆ ಚೂರು ಚೂರಾಗಿದೆ. ಗುಂಡಿನ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಬೆಚ್ಚಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಡ್ರಗ್ಸ್ ಕೇಸ್: ಆರ್ಯನ್ ಖಾನ್ ಸೇರಿ 8 ಮಂದಿಗೆ 14 ದಿನ ನ್ಯಾಯಾಂಗ ಬಂಧನ