newsics.com
ಮೈಸೂರು: ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲೆಂದು ಆಗಮಿಸಿದ್ದ ವಿಕ್ರಮ ಆನೆಗೆ ಮದವೇರಿರುವುದರಿಂದ ದಸರಾ ಕಾರ್ಯಕ್ರಮಗಳಲ್ಲಿ ಈ ಆನೆಯನ್ನು ಬಳಸಿಕೊಳ್ಳುತ್ತಿಲ್ಲ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ.
ಇಂತಹ ಸಮಸ್ಯೆ ಉಂಟಾಗಬಹುದೆಂಬ ಕಾರಣಕ್ಕೆ ಮೂರು ಆನೆಗಳನ್ನು ಹೆಚ್ಚುವರಿಯಾಗಿ ಕರೆತಂದಿದ್ದೇವೆ ಎಂದು ಅವರು ಹೇಳಿದ್ದಾರೆ.
ಜಂಬೂಸವಾರಿಗೆ ಐದು ಆನೆಗಳು ಮಾತ್ರ ಸಾಕು. ಆದರೆ ನಾವು 8 ಆನೆಗಳನ್ನು ತಂದಿದ್ದು, ನಗರದ ವಾತಾವರಣಕ್ಕೆ ಹೊಂದಿಕೊಳ್ಳಲು ಕೊನೆ ಹಂತದಲ್ಲಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ದಸರಾ ವೇಳೆ ಆನೆ ಅಭಿಮನ್ಯು ಅಕ್ಕಪಕ್ಕ ಎರಡು ಹೆಣ್ಣಾನೆಗಳಿರುತ್ತವೆ. ನಿಶಾನೆ ಆನೆ, ನೌಪತ್ ಆನೆ ಸೇರಿ ಒಟ್ಟು 5 ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿವೆ ಎಂದು ಕರಿಕಾಳನ್ ತಿಳಿಸಿದರು.
ದೇಶದಲ್ಲಿ 18,166 ಮಂದಿಗೆ ಕೊರೋನಾ, 23,624 ಜನ ಗುಣಮುಖ, 214 ಸೋಂಕಿತರು ಸಾವು