newsics.com
ಬೆಂಗಳೂರು: ರಾಜ್ಯದಲ್ಲಿ ಸಚಿವರು, ಶಾಸಕರು, ಐಎಎಸ್ ಹಾಗೂ ಐಪಿಸ್ ಅಧಿಕಾರಿಗಳ ಮೇಲೆ ಕೋವ್ಯಾಕ್ಸಿನ್ ಪ್ರಯೋಗ ಮಾಡಲು ಸಿದ್ಧತೆ ನಡೆದಿದೆ.
ಭಾರತ್ ಬಯೋಟೆಕ್ ಸಿದ್ಧಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ಈವರೆಗೆ 14 ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿ 98 ಮಂದಿ ಮೇಲೆ ಪ್ರಯೋಗ ಮಾಡಲಾಗಿದೆ. ವೈದೇಹಿ ಆಸ್ಪತ್ರೆಯಲ್ಲಿ 120 ಜನರ ಮೇಲೆ ಕ್ಲಿನಿಕಲ್ ಟ್ರಯಲ್ ಮಾಡಲಾಗಿದ್ದು, ಎರಡು ಹಂತಗಳಲ್ಲಿ ಇದುವರೆಗೂ ಒಟ್ಟು 382 ಮಂದಿಗೆ ಈ ಲಸಿಕೆ ಪ್ರಯೋಗ ಮಾಡಲಾಗಿದೆ ಎಂದು ಕ್ಲೀನ್ ಟ್ರ್ಯಾಕ್ ಇಂಟರ್ ನ್ಯಾಷಿನಲ್ ಪ್ರೈ.ಲಿ ನಿರ್ದೇಶಕಿ ಚೈತನ್ಯ ಆದಿಶೇಶವಲು ಹೇಳಿದ್ದಾರೆ.
ಲಸಿಕೆ ಪ್ರಯೋಗಕ್ಕೆ ಒಳಗಾಗಲು ಸಾರ್ವಜನಿಕರು ಭಯಪಡುತ್ತಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಮೇಲೆ ಈ ಪ್ರಯೋಗ ಮಾಡಲಾಗುತ್ತಿದೆ ಎಂದು ಆದಿಶೇಶವಲು ತಿಳಿಸಿದ್ದಾರೆ.
ನಾಳೆ ಅಥವಾ ನಾಡಿದ್ದು ಹೊಸ ಮಾರ್ಗಸೂಚಿ ಬಿಡುಗಡೆ
ಕ್ಯಾನ್ಸರ್’ಗೆ ಕಾರಣವಾಗುವ ಡಿಎನ್ಎ ಪತ್ತೆ
ರಾಜ್ಯಕ್ಕೆ ಹೊಸ ಬಗೆಯ ಕೊರೋನಾ; ಕೇಂದ್ರದಿಂದಲೇ ಮಾಹಿತಿ- ಸಚಿವ