ಬೆಂಗಳೂರು: ಕ್ರಿಕೆಟಿಗ ಅಭಿಮನ್ಯು ಮಿಥುನ್ ಪ್ರಥಮ ದರ್ಜೆ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. ಅಭಿಮನ್ಯು ಮಿಥುನ್ ಪೇಸ್ ಬೌಲರ್ ಆಗಿದ್ದಾರೆ.
ಅಭಿಮನ್ಯು ಮಿಥುನ್ ಭಾರತದ ಪರ 4 ಟೆಸ್ಟ್ ಆಡಿದ್ದಾರೆ. ಟೆಸ್ಚ್ ನಲ್ಲಿ 9 ವಿಕೆಟ್ ಪಡೆದಿದ್ದಾರೆ. 2010ರಲ್ಲಿ ಶ್ರೀಲಂಕಾದ ಗಾಲೆಯಲ್ಲಿ ನಡೆದ ಪಂದ್ಯದಲ್ಲಿ ಅಭಿಮನ್ಯು ಮಿಥುನ್ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು.
ಐದು ಏಕದಿನ ಪಂದ್ಯಗಳಲ್ಲಿ ಅಭಿಮನ್ಯು ಮಿಥುನ್ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇದುವರೆಗೆ ಅಭಿಮನ್ಯು ಮಿಥುನ್ 103 ಪ್ರಥಮ ದರ್ಜೆ ಪಂದ್ಯ ಆಡಿದ್ದಾರೆ. ಈ ಪಂದ್ಯಗಳಲ್ಲಿ 338 ವಿಕೆಟ್ ಪಡೆದಿದ್ದಾರೆ.
ಐಪಿಎಲ್ ಪಂದ್ಯಗಳಲ್ಲಿ ಆರ್ ಸಿ ಬಿ, ಮುಂಬೈ ಮತ್ತು ಹೈದರಾಬಾದ್ ತಂಡವನ್ನು ಅಭಿಮನ್ಯು ಮಿಥುನ್ ಪ್ರತಿನಿಧಿಸಿದ್ದರು.