Wednesday, May 18, 2022

ಕೆಎಎಸ್ ಅಧಿಕಾರಿ ಡಾ. ಸುಧಾ ಮನೆ ಮೇಲೆ ಎಸಿಬಿ ದಾಳಿ

Follow Us

newsics.com

ಬೆಂಗಳೂರು: ಭೂ ಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಕೆ ಎ ಎಸ್ ಅಧಿಕಾರಿ ಡಾ. ಸುಧಾ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದೆ. ಡಾ. ಸುಧಾ ಅವರ ಪರಿಚಯಸ್ಥರ ಮನೆಗಳಿಗೆ ಕೂಡ ದಾಳಿ ನಡೆಸಲಾಗಿದೆ.

ಕೊಡಿಗೆಹಳ್ಳಿಯಲ್ಲಿರುವ ಡಾ. ಸುಧಾ ಅವರ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ನೋಟು ಎಣಿಸುವ ಯಂತ್ರಗಳನ್ನು ಕೂಡ ಮನೆಗೆ ತೆಗೆದುಕೊಂಡು ಹೋಗಲಾಗಿದೆ.

ಮೈಸೂರು ಮತ್ತು ಉಡುಪಿಯಲ್ಲಿರುವ ಡಾ. ಸುಧಾ ಅವರ ಮನೆಯಲ್ಲಿ ಕೂಡ ಶೋಧ ನಡೆದಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ಡಾ ಸುಧಾ ಅವರು ವರ್ಗಾವಣೆಯಾಗಿದ್ದರು.

ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದ ವೇಳೆ ಸುಧಾ ಅವರು ಭಾರೀ  ಭ್ರಷ್ಟಾಚಾರ ಎಸಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.

ಯಲಹಂಕದಲ್ಲಿ ಡಾ . ಸುಧಾ ಅವರ ಪ್ಲಾರ್ಟ್ ನಲ್ಲಿ ಕೂಡ ತಪಾಸಣೆ ನಡೆಸಲಾಗಿದೆ.

ಮುಂಜಾನೆ ಆರು ಗಂಟೆಗೆ ಆರಂಭವಾಗಿರುವ ಶೋಧ ಕಾರ್ಯ ಈಗಲೂ ಮುಂದುವರಿದಿದೆ. ಸುಧಾ ಅವರ ಪತಿ ಕೆಲವು ಕನ್ನಡ ಸಿನೆಮಾ ಕೂಡ ನಿರ್ಮಿಸಿದ್ದಾರೆ.

ಒಂದೇ ದಿನ 50, 357 ಮಂದಿಗೆ ಕೊರೋನಾ ಸೋಂಕು,577 ಬಲಿ

ಮತ್ತಷ್ಟು ಸುದ್ದಿಗಳು

Latest News

ಉಪ್ಪಿನ ಕಾರ್ಖಾನೆ ಗೋಡೆ ಕುಸಿದು 12‌ ಕಾರ್ಮಿಕರು ಸಾವು

newsics.com ಅಹಮದಾಬಾದ್: ಉಪ್ಪು ಪ್ಯಾಕೇಜಿಂಗ್ ಕಾರ್ಖಾನೆಯೊಂದರ ಗೋಡೆ ಕುಸಿದು ಬುಧವಾರ 12 ಕಾರ್ಮಿಕರು ಮೃತಪಟ್ಟಿದ್ದಾರೆ. ಗುಜರಾತ್‌ನ ಮೊರ್‌ಬಿ ಜಿಲ್ಲೆಯ ಹಲ್‌ವಾಡ್ ಕೈಗಾರಿಕಾ ಪ್ರದೇಶದ ‘ಸಾಗರ್ ಸಾಲ್ಟ್ ಫ್ಯಾಕ್ಟರಿ’ಯಲ್ಲಿ ಈ...

ಕನ್ನಡ ಕಲಿಕೆಗೆ‌ ಬಂತು ಸರ್ಕಾರಿ ಇ- ಪೋರ್ಟಲ್

newsics.com ಬೆಂಗಳೂರು: ಕನ್ನಡ ಕಲಿಯುವವರಿಗಾಗಿ ಸರ್ಕಾರಿ ಇ‌- ಕನ್ನಡ ಪೋರ್ಟಲ್ ಅಸ್ತಿತ್ವಕ್ಕೆ ಬಂದಿದೆ. ಇದರಿಂದ ಕರ್ನಾಟಕ ಹಾಗು ಹೊರಗೆ ವಾಸಿಸುತ್ತಿರುವ ಕನ್ನಡೇತರರು ಸರ್ಕಾರಿ ವೆಬ್ ಸೈಟ್‌ನಲ್ಲಿ ಕನ್ನಡ ಕಲಿಯಬಹುದು. ಇ-ಕನ್ನಡ ಪೋರ್ಟಲ್‌ಗೆ ಹೋಗಿ ಆನ್‌ಲೈನ್...

ನಾಳೆ ಮಧ್ಯಾಹ್ನ 12:30ಕ್ಕೆ SSLC ರಿಸಲ್ಟ್

newsics.com ಬೆಂಗಳೂರು: ಗುರುವಾರ (ಮೇ 19) ಮಧ್ಯಾಹ್ನ 12.30ಕ್ಕೆ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ ಕುರಿತಂತೆ ಟ್ವೀಟ್ ಮಾಡಿದ್ದಾರೆ. 'ನಾಳೆ ಮಧ್ಯಾಹ್ನ 12.30ಕ್ಕೆ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಮಧ್ಯಾಹ್ನ 1...
- Advertisement -
error: Content is protected !!