newsics.com
ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟದ ತನಿಖೆಯನ್ನು ಎನ್ ಐ ಎ ಕೈಗೆತ್ತಿಕೊಂಡಿದ್ದು, ಶಂಕಿತ ಆರೋಪಿ ಶಾರೀಕ್ ವಿಚಾರಣೆ ಮುಂದುವರಿದಿದೆ. ಆದರೆ ತನಿಖಾಧಿಕಾರಿಗಳ ಯಾವುದೇ ಪ್ರಶ್ನೆಗೆ ಶಾರೀಕ್ ಸಮರ್ಪಕ ಉತ್ತರ ನೀಡಿಲ್ಲ ಎಂದು ವರದಿಯಾಗಿದೆ.
ಶಾರೀಕ್ ಇನ್ನಷ್ಟೇ ಚೇತರಿಸಬೇಕಾಗಿದ್ದು, ಇದು ತನಿಖೆಗೆ ಅಡ್ಡಿಯಾಗಿದೆ. ಒಂದು ವಾರದ ಬಳಿಕ ಶಾರೀಕ್ ಹೇಳಿಕೆ ನೀಡುವ ಸ್ಥಿತಿಗೆ ತಲುಪಲಿದ್ದಾನೆ ಎಂದು ವೈದ್ಯರು ಅಂದಾಜಿಸಿದ್ದಾರೆ.
ಮಂಗಳೂರು ಕುಕ್ಕರ್ ಸ್ಫೋಟ ಒಂದು ದೊಡ್ಡ ಷಡ್ಯಂತ್ರದ ಭಾಗವಾಗಿದೆ ಎಂಬುದು ಇದುವರೆಗಿನ ತನಿಖೆಯಿಂದ ತಿಳಿದು ಬಂದಿದೆ