Tuesday, April 13, 2021

ನಟ ಹುಚ್ಚ ವೆಂಕಟ್ ಮೇಲಿನ ಹಲ್ಲೆಗೆ ಸ್ಯಾಂಡಲ್’ವುಡ್ ಮರುಕ

ಬೆಂಗಳೂರು: ಮಂಡ್ಯದಲ್ಲಿ ನಟ ಹುಚ್ಚ ವೆಂಕಟ್ ಮೇಲೆ ನಡೆದ ಹಲ್ಲೆಗೆ ಸ್ಯಾಂಡಲ್’ವುಡ್ ಮರುಗಿದೆ. ಹುಚ್ಚ ವೆಂಕಟಗೆ ಬೇಕಾಗಿರೋದು ಈ ರೀತಿಯ ಕ್ರೌರ್ಯವಲ್ಲ ಚಿಕಿತ್ಸೆ ದಯವಿಟ್ಟು ಆತನ ಮೇಲೆ ಹಲ್ಲೆ ಮಾಡೋದನ್ನು ನಿಲ್ಲಿಸಿ ಎಂದು ನಟರು ಮನವಿ ಮಾಡಿದ್ದಾರೆ.
ತಮ್ಮ ಫೇಸ್’ಬುಕ್ ನಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ನಟ ದುನಿಯಾ ವಿಜಯ್, ಹುಚ್ಚ ವೆಂಕಟ ಮಾನಸಿಕ ಸ್ಥಿತಿ ಸರಿಯಿಲ್ಲ ಅನ್ನೋದು ಕರ್ನಾಟಕ ಕ್ಕೆ ತಿಳಿದ ವಿಚಾರ. ಹೀಗಾಗಿ ಅತನಿಗೆ ಚಿಕಿತ್ಸೆ‌ಕೊಡಿಸುವಂತೆ ಸಂಬಂಧಿಸಿದವರನ್ನು ಒತ್ತಾಯಿಸಬೇಕೇ ವಿನಃ ಈ ರೀತಿ ಹಲ್ಲೆ ಮಾಡಿ ಹಿಂಸಿಸೋದು ಎಷ್ಟು ಸರಿ? ಯಾರ ಯೋಗವನ್ನು ಯಾರೂ ಕಂಡಿಲ್ಲ. ಆತನೂ ಆರೋಗ್ಯ ಸುಧಾರಿಸಿ ಒಳ್ಳೆಯ ಮಟ್ಟಕ್ಕೆ ಏರಬಹುದಲ್ಲವೇ ಎಂಬರ್ಥದಲ್ಲಿ ಮನವಿ ಮಾಡಿದ್ದಾರೆ.
ಇನ್ನು ಹುಚ್ಚ ವೆಂಕಟ ಮೇಲಿನ ಹಲ್ಲೆಗೆ ಭಾವುಕವಾಗಿ ಪ್ರತಿಕ್ರಿಯಿಸಿರುವ ನವರಸ ನಾಯಕ ಜಗ್ಗೇಶ್, ಹುಚ್ಚ ವೆಂಕಟನ ಮೇಲಿನ ಹಲ್ಲೆ ಅಮಾನುಷ. ಈ ರೀತಿ ಹಲ್ಲೆ ಮಾಡಿ ವಿಡಿಯೋ ಬಿಡುಗಡೆ ಮಾಡೋದು ಎಷ್ಟು ಸರಿ. ನನಗೂ ಇಂತಹುದೇ ದೇವರ ಮಗನಂಥ ತಮ್ಮನಿದ್ದಾನೆ. ಅವನನ್ನು 50 ವರ್ಷದಿಂದ ಜೋಪಾನ‌ ಮಾಡುತ್ತಿದ್ದೇವೆ ಎಂದಿದ್ದಾರೆ. ಅಲ್ಲದೇ ವೆಂಕಟ್ ಗೆ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ
ಹುಚ್ಚ ವೆಂಕಟ್ ಗೆ ಸಾರ್ವಜನಿಕರು ಥಳಿಸಿದ ವಿಡಿಯೋ ಕಳೆದೆರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!