newsics.com
ಬೆಂಗಳೂರು: ತಮ್ಮ ವಿಶಿಷ್ಟ ಹಾಸ್ಯ ನಟನೆಯ ಮೂಲಕ ಚಂದನವನದಲ್ಲಿ ಪ್ರಸಿದ್ಧರಾಗಿದ್ದ ನಟ ರಾಕ್’ಲೈನ್ ಸುಧಾಕರ್ ಹೃದಯಾಘಾತದಿಂದ ಗುರುವಾರ ಬೆಳಗ್ಗೆ ನಿಧನರಾದರು.
ಸಿನಿಮಾವೊಂದರ ಶೂಟಿಂಗ್ ವೇಳೆಯೇ ಅವರು ಕೊನೆಯುಸಿರೆಳೆದರು. ಮೇಕಪ್ ಹಚ್ಚಿದ್ದಾಗಲೇ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.
ನಟ ರಾಕ್’ಲೈನ್ ಸುಧಾಕರ್ 2012ರಲ್ಲಿ ಡಕೋಟಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಟ ದಿಗಂತ್ ಅಭಿನಯದ ಪಂಚರಂಗಿ ಚಿತ್ರದ ಮೂಲಕ ಪ್ರಖ್ಯಾತಿ ಪಡೆದಿದ್ದರು. ರಾಮಾಚಾರಿ, ಪರಮಾತ್ಮ, ಡ್ರಾಮಾ, ಟೋಪಿವಾಲ, ಝೂಮ್, ಲವ್ ಇನ್ ಮಂಡ್ಯ, ವಾಸ್ತು ಪ್ರಕಾರ ಸೇರಿದಂತೆ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.
ನಟ ರಾಕ್’ಲೈನ್ ಸುಧಾಕರ್ ಇನ್ನಿಲ್ಲ
Follow Us