newsics.com
ಮಂಗಳೂರು: ಲಾಕ್ ಡೌನ್ ನಿಂದ ದೇಶದಲ್ಲಿ ನ್ಯಾಯಾಲಯದ ಕಲಾಪ ಕೂಡ ಸ್ಥಗಿತಗೊಂಡಿತ್ತು. ಇದರಿಂದ ಹೆಚ್ಚು ತೊಂದರೆಗೆ ಒಳಗಾದವರು ಯುವ ವಕೀಲರು. ನಿರ್ದಿಷ್ಟವಾದ ಆದಾಯ ಮಾರ್ಗಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಹೊತ್ತಿನಲ್ಲಿ ಮಂಗಳೂರು ಸಮೀಪದ ಮಹಿಳಾ ನ್ಯಾಯವಾದಿಯೊಬ್ಬರು ಕಂಡು ಕೊಂಡ ಮಾರ್ಗ ಮಲ್ಲಿಗೆ ಕೃಷಿ .
ಮಲ್ಲಿಗೆ ಕೃಷಿ ಅವರ ಕನಸನ್ನು ಭಗ್ನಗೊಳಿಸಲಿಲ್ಲ. ಕೈ ಹಿಡಿದು ಮೇಲಕ್ಕೆ ಎತ್ತಿತ್ತು. ಶಂಕರಪುರ ಮಲ್ಲಿಗೆ ಅಂದರೆ ಉಡುಪಿ ಮಲ್ಲಿಗೆಯ ಕೃಷಿಯನ್ನು ಆರಂಭಿಸಿದ ವಕೀಲೆ ಕಿರಣ್ ದೇವಾಡಿಗ ಇದರಲ್ಲಿ ಯಶಸ್ಸು ಗಳಿಸಿದ್ದಾರೆ. ಇದುವರೆಗೆ 85,000 ರೂಪಾಯಿ ಆದಾಯ ಗಳಿಸಿದ್ದಾರೆ.
ಉಡುಪಿ ಮಲ್ಲಿಗೆ ಅದರ ಸುವಾಸನೆಗೆ ಹೆಸರುವಾಸಿಯಾಗಿದೆ. ಕರಾವಳಿಯಲ್ಲಿ ಇದಕ್ಕೆ ಉತ್ತಮ ಮಾರುಕಟ್ಟೆ ಇದೆ. ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ.
ಮನೆಯ ಟೆರೇಸ್ ನಲ್ಲಿ ಮಲ್ಲಿಗೆ ಕೃಷಿ ಆರಂಭಿಸಿರುವ ಕಿರಣ್ ದೇವಾಡಿಗ ಯು ಟ್ಯೂಬ್ ಚಾನೆಲ್ ಮೂಲಕ ಇದರ ಬಗ್ಗೆ ತಿಳಿದುಕೊಂಡಿದ್ದರು. ಜತೆಗೆ ಇತರ ಮಲ್ಲಿಗೆ ಕೃಷಿ ಬೆಳೆಸುವವರ ಜತೆ ಸಮಾಲೋನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದರು.
ಅವರ ನಿರಂತರ ಪ್ರಯತ್ನ ಮತ್ತು ಕಾಳಜಿ ಪರಿಣಾಮವಾಗಿ ಅವರ ಮನೆಯ ಟೆರೇಸ್ ನಲ್ಲಿರುವ ಮಲ್ಲಿಗೆ ಗಿಡಗಳು ಅವರಿಗೆ ಆದಾಯ ತರುವ ಮಾರ್ಗಗಳಾಗಿ ಪರಿವರ್ತನೆಗೊಂಡಿವೆ.
ವಿವಾಹ ನೋಂದಣಿಗೆ ನೇರ ಉಪಸ್ಥಿತಿ ಅಗತ್ಯ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪು