ಬೆಂಗಳೂರು: ;ಚಂದನವನದ ತಾರಾದಂಪತಿಯಾಗಿರುವ ಐಂದ್ರಿತಾ ರೇ ಮತ್ತು ದಿಗಂತ್ ವಿಚಾರಣೆ ಇಂದು ನಡೆಯಲಿರುವ ಹಿನ್ನೆಲೆಯಲ್ಲಿ ಮಿಲಿಯನ್ ಡಾಲರ್ ಪ್ರಶ್ನೆ ಎದುರಾಗಿದೆ. ಸಂಜನಾ ಮತ್ತು ರಾಗಿಣಿಯಂತೆ ಐಂದ್ರಿತಾ ಅವರನ್ನು ಸಿಸಿಬಿ ಬಂಧಿಸುವ ಸಾಧ್ಯತೆಯಿದೆಯೇ ಎಂಬ ಮಾತು ಎಲ್ಲೆಡೆ ಚರ್ಚೆಯಾಗುತ್ತಿದೆ.
ಮಾದಕ ದ್ರವ್ಯ ಜಾಲದ ತನಿಖೆ ನಡೆಸುತ್ತಿರುವ ಸಿಸಿಬಿ ಇಂದು ಐಂದ್ರಿತಾ ರೇ ಮತ್ತು ಅವರ ಪತಿ ದಿಗಂತ್ ವಿಚಾರಣೆ ನಡೆಸಲಿದೆ. ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಇಬ್ಬರೂ ಕೂಡ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಕನ್ನಡ ನಟಿಯರ ಪೈಕಿ ಅತೀ ಹೆಚ್ಚು ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿಯರಲ್ಲಿ ಐಂದ್ರಿತಾ ಮೊದಲ ಸಾಲಿನಲ್ಲಿ ಇದ್ದಾರೆ. ವಿದೇಶಗಳಲ್ಲಿ ಕೂಡ ಅವರು ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದರು.
ಐಂದ್ರಿತಾ ರೇ ಕೊಲಂಬೋದಲ್ಲಿ ಕ್ಯಾಸಿನೋಕ್ಕೆ ಭೇಟಿ ನೀಡಿದ್ದಳು ಎಂಬ ಮಾಹಿತಿ ಈಗಾಗಲೇ ಬಹಿರಂಗವಾಗಿದೆ. ಶೇಕ್ ಫಾಝಿಲ್ ಕೊಲಂಬೊದಲ್ಲಿ ಆಯೋಜಿಸುತ್ತಿದ್ದ ಕ್ಯಾಸಿನೋ ಪಾರ್ಟಿಗೆ ಐಂದ್ರಿತಾ ಭೇಟಿ ನೀಡುತ್ತಿದ್ದಳು ಎಂಬ ಮಾಹಿತಿ ಆಧಾರದಲ್ಲಿ ಸಿಸಿಬಿ ತನಿಖೆಗೆ ಮುಂದಾಗಿದೆ ಎಂದು ವರದಿಯಾಗಿದೆ