Saturday, January 28, 2023

ಏರ್‌ಟೆಲ್ ಮಿನಿಮಮ್ ರೀಚಾರ್ಜ್ ಪ್ಲ್ಯಾನ್ ಬೆಲೆ ಏರಿಕೆ!

Follow Us

newsics.com

ನವದೆಹಲಿ: ಏರ್‌ಟೆಲ್ ಇಂದು ತನ್ನ ಮಿನಿಮಮ್ ರೀಚಾರ್ಜ್ ಪ್ಲ್ಯಾನ್ ಬೆಲೆ ಹೆಚ್ಚಿಸುವ ಮೂಲಕ ರಾಜ್ಯದ  ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ.

ಈ ಮೊದಲು ಇದ್ದ 99 ರೂ.ಬೆಲೆಯ ಕನಿಷ್ಠ ರೀಚಾರ್ಜ್ ಪ್ಲ್ಯಾನ್ 28 ದಿನಗಳವರೆಗೆ ವ್ಯಾಲಿಡಿಟಿಯಲ್ಲಿ 200 MBಯ ಅತ್ಯಂತ ಸೀಮಿತ ಡೇಟಾವನ್ನು ಒದಗಿಸುತ್ತಿತ್ತು. ಆದರೆ, ಈ ಯೋಜನೆಯು ಇನ್ಮುಂದೆ ಬಳಕೆದಾರರಿಗೆ ಲಭ್ಯವಿರುವುದಿಲ್ಲ.

ಏರ್‌ಟೆಲ್ ತನ್ನ ಮಿನಿಮಮ್ ರಿಚಾರ್ಜ್ ಬೆಲೆಯನ್ನು 155 ರೂ.ಗೆ ಏರಿಸಿದೆ.  ಹರಿಯಾಣ ಮತ್ತು ಒಡಿಶಾ ವಲಯಗಳಲ್ಲಿ ಏರ್‌ಟೆಲ್ ಗ್ರಾಹಕರು ತಮ್ಮ ಸಿಮ್ ಸಕ್ರೀಯವಾಗಿ ಇರಿಸಿಕೊಳ್ಳಲು ಕನಿಷ್ಠ ಎಂದರೂ 155 ರೂ. ರೀಚಾರ್ಜ್ ಮಾಡಿಸಬೇಕು ಎಂದು ತಿಳಿದುಬಂದಿತ್ತು. ಇದೀಗ ಇದೇ ರೀತಿಯ ಬೆಲೆ ಏರಿಕೆಯ ಬದಲಾವಣೆಯನ್ನು ಕರ್ನಾಟಕ, ಆಂಧ್ರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಈಶಾನ್ಯ ಭಾಗ, ರಾಜಸ್ಥಾನ, ಮತ್ತು ಯುಪಿ-ಪಶ್ಚಿಮ ಪ್ರದೇಶಗಳಲ್ಲಿ ಸಹ ಜಾರಿಗೆ ತರಲಾಗಿದೆ.

155 ರೂ. ಬೆಲೆಯ ಕನಿಷ್ಠ ರೀಚಾರ್ಜ್ ಪ್ಲ್ಯಾನ್ 28 ದಿನಗಳವರೆಗೆ ಅನಿಯಮಿತ ಧ್ವನಿ, 1GB ಡೇಟಾ ಮತ್ತು 300 ಎಸ್ಸೆಮ್ಮೆಸ್‌ಗಳನ್ನು ನೀಡುತ್ತದೆ.

ಇನ್ಮುಂದೆ ಕನ್ನಡ ಸೇರಿ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ‘ಸುಪ್ರೀಂ’ ತೀರ್ಪು!

ಮತ್ತಷ್ಟು ಸುದ್ದಿಗಳು

vertical

Latest News

ಗಣರಾಜ್ಯೋತ್ಸವದಿನದಂದು ಪ್ರಧಾನಿ ಮೋದಿಯ ರಕ್ಷಣೆ ಹೊಣೆ ಹೊತ್ತ ಮಂಗಳೂರಿನ ಐಪಿಎಸ್ ಅಧಿಕಾರಿ

newsics..com  ಮಂಗಳೂರು: ಜನವರಿ 26ರಂದು ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರ ಹಿಂದೆ ನಿಂತು ಎಲ್ಲವನ್ನು ಹದ್ದು ಕಣ್ಣಿನಿಂದ ವೀಕ್ಷಿಸುತ್ತಿದ್ದ ಪೊಲೀಸ್ ಅಧಿಕಾರಿ...

ನನಗೆ ನಿದ್ದೆ ಬರುತ್ತಿದೆ, ದಯವಿಟ್ಟು ರೈಡ್ ಕ್ಯಾನ್ಸಲ್ ಮಾಡಿ ಎಂದ ಉಬೇರ್ ಚಾಲಕ

newsics.com ಬೆಂಗಳೂರು: ವೆಬ್ ಆಧಾರಿತ ಸೇವೆ ನೀಡುವ ಕಾರು ಚಾಲಕರು ದಿನದ 24 ಗಂಟೆಯೂ ಅಲರ್ಟ್ ಆಗಿರುತ್ತಾರೆ.  ಕೆಲವೊಮ್ಮೆ ಇಲ್ಲದ ಕಾರಣ ನೀಡಿ ಅಂತಿಮ ಕ್ಷಣದಲ್ಲಿ  ರೈಡ್ ಕ್ಯಾನ್ಸಲ್ ಮಾಡುತ್ತಾರೆ. ಇದು ಸಾಮಾನ್ಯ. ಪರಿಸ್ಥಿತಿ...

ಪ್ರಾರ್ಥನಾ ಮಂದಿರದ ಮೇಲೆ ಭಯೋತ್ಪಾದಕರ ದಾಳಿ: ಐವರ ಸಾವು, 10 ಮಂದಿಗೆ ಗಾಯ

newsics.com ಜೆರುಸಲೇಂ: ಇಸ್ರೇಲ್ ನ ಜೆರುಸಲೇಂನಲ್ಲಿರುವ ಪ್ರಾರ್ಥನಾ ಮಂದಿರದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ. ಗುಂಡಿನ ದಾಳಿಯಲ್ಲಿ 10 ಮಂದಿ ಗಾಯಗೊಂಡಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ನಡೆಸಿದ ಕಾರ್ಯಾಚರಣೆಯಲ್ಲಿ...
- Advertisement -
error: Content is protected !!