Wednesday, July 6, 2022

ವೆಂಟಿಲೇಟರ್ ಸಿಗದೆ ಮತ್ತೊಬ್ಬ ಸಾವು

Follow Us

ಕಲಬುರಗಿ: ವೆಂಟಿಲೇಟರ್ ಸೌಲಭ್ಯ ಸಿಗದೆ ಮತ್ತೊಬ್ಬ ರೋಗಿ ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ಶನಿವಾರ ನಡೆದಿದೆ. ನಿಗದಿತ ವೇಳೆಯಲ್ಲಿ ವೆಂಟಿಲೇಟರ್ ಸಿಗದ ಕಾರಣ 47 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ನಿವಾಸಿ ಮುಸ್ತಫಾ ಮೃತರು.
ಮುಸ್ತಫಾ ಅವರು ಮೂತ್ರ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆ ಸಮಯ ಅವರಿಗೆ ಕೊರೋನಾ ವೈರಸ್ ಪರೀಕ್ಷೆ ನಡೆಸಲಾಗಿದ್ದು, ಕೊರೋನಾ ವರದಿ ಸಹ ನೆಗೆಟಿವ್ ಬಂದಿತ್ತು.

ಗರ್ಭಿಣಿಯನ್ನು ದೊಡ್ಡಪಾತ್ರೆಯಲ್ಲಿಟ್ಟು ನದಿ ದಾಟಿಸಿದರು…!

ಆದರೆ ಶನಿವಾರ ಬೆಳಗ್ಗೆ ಮುಸ್ತಫಾ ತೀವ್ರ ಅಸ್ವಸ್ಥಗೊಂಡಿದ್ದರು. ಪರಿಸ್ಥಿತಿ ಹದಗೆಟ್ಟಿದ್ದು, ವೆಂಟಿಲೇಟರ್ ಅವಶ್ಯಕತೆ ಎದುರಾಗಿತ್ತು. ಆದರೆ ಕಲಬುರಗಿಯಲ್ಲಿ ಎಲ್ಲೂ ವೆಂಟಿಲೇಟರ್ ಸೌಲಭ್ಯ ಸಿಗಲಿಲ್ಲ. ವೆಂಟಿಲೇಟರ್ ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿರುವಾಗಲೇ ಮುಸ್ತಫಾ ಅವರು ಪ್ರಾಣಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ವೆಂಟಿಲೇಟರ್ ಕೊರತೆ ತೀವ್ರವಾಗಿದ್ದು, ವಾರದಲ್ಲಿ ವೆಂಟಿಲೇಟರ್ ಸಿಗದೆ ಸಂಭವಿಸಿದ ಮೂರನೇ ಸಾವು ಇದಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ:  ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ  ನಗರದ ನವಲೂರಿನಲ್ಲಿ ಈ  ಘಟನೆ ನಡೆದಿದೆ. ಸಾಫ್ಟವೇರ್...

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಕಳೆದ 24 ಗಂಟೆ...

ಆದಾಯ ತೆರಿಗೆ ವಂಚನೆ : ಡೋಲೋ ಮಾತ್ರೆ ಕಚೇರಿ ಮೇಲೆ ದೇಶವ್ಯಾಪಿ ದಾಳಿ

newsics.com ಬೆಂಗಳೂರು: ಆದಾಯ ತೆರಿಗೆ ವಂಚಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಮಾತ್ರೆ ತಯಾರಕ ಸಂಸ್ಥೆ ಡೋಲೋ ಮುಖ್ಯ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ...
- Advertisement -
error: Content is protected !!