ಬೆಂಗಳೂರು: ಮಾರಕ ಕೊರೋನಾ ತಡೆಗಟ್ಟಲು ಬೆಂಗಳೂರಿನಲ್ಲಿ ಇಂದಿನಿಂದ ತ್ವರಿತ ಆ್ಯಂಟಿಜೆನ್ ಟೆಸ್ಟ್ ನಡೆಯಲಿದೆ. ಕಂಟೇನ್ ಮೆಂಟ್ ವಲಯದಲ್ಲಿರುವ ಎಲ್ಲ ನಿವಾಸಿಗಳನ್ನು ಪರೀಕ್ಷೆಗೆ ಗುರಿಪಡಿಸಲು ನಿರ್ಧರಿಸಲಾಗಿದೆ. ಮೂರು ದಿನಗಳ ಕಾಲ ಇದು ಮುಂದುವರಿಯಲಿದೆ.
ಆ್ಯಂಟಿಜೆನ್ ಟೆಸ್ಟ್ ನಡೆಯಲಿರುವ ಹಿನ್ನೆಲೆಯಲ್ಲಿ ಗಂಟಲು ದ್ರವ ಪರೀಕ್ಷೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.ಆ್ಯಂಟಿಜೆನ್ ಟೆಸ್ಸ್ ನಲ್ಲಿ ಫಲಿತಾಂಶ ಶೀಘ್ರವಾಗಿ ದೊರೆಯಲಿದೆ. ಬೆಂಗಳೂರಿನಲ್ಲಿರುವ ಫೀವರ್ ಸೆಂಟರ್ ಮತ್ತು ಆಸ್ಪತ್ರೆಗಳಲ್ಲಿ ಕೂಡ ಈ ಪರೀಕ್ಷೆ ನಡೆಯಲಿದೆ.
ಮಾರಕ ಕೊರೋನಾ ಬೆಂಗಳೂರಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜಧಾನಿಯನ್ನು ಈಗಾಗಲೆ ಎಂಟು ವಲಯಗಳಾಗಿ ವಿಭಜಿಸಲಾಗಿದ್ದು, ಎಂಟು ಸಚಿವರಿಗೆ ಹೊಣೆಗಾರಿಕೆ ನೀಡಲಾಗಿದೆ