ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯ ಹೆಸರಲ್ಲಿ ನಕಲಿ ವಿಡಿಯೋ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ತಿಲಕ್ ನಗರದ ಸಮೀರ್ ವುಲ್ಲಾ ಬಂಧಿತ ಆರೋಪಿ. ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅನ್ಯರಾಜ್ಯದ ಆಸ್ಪತ್ರೆಯ ವಿಡಿಯೋವನ್ನು ಹಂಚಿಕೊಂಡಿದ್ದ ಆರೋಪಿ ಬೆಂಗಳೂರಿನ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ವಿಡಿಯೋ ಎಂದು ಪೋಸ್ಟ್ ಮಾಡಿದ್ದಾನೆ.
ಇದು ನಕಲಿ ವಿಡಿಯೋ. ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಅತ್ಯುತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ. ಆಸ್ಪತ್ರೆಯೊಂದರ ಒಪಿಡಿ ಎದುರು ಜನ ಸಾಲುಗಟ್ಟಿ ನಿಂತಿರುವ ವಿಡಿಯೋ ಪೋಸ್ಟ್ ಮಾಡಿ ವಿಕ್ಟೋರಿಯಾ ಆಸ್ಪತ್ರೆಯ ದೃಶ್ಯವೆಂದು ಹಾಕಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೇರೆ ರಾಜ್ಯದ ವಿಡಿಯೋವನ್ನು ವಿಕ್ಟೋರಿಯಾ ಆಸ್ಪತ್ರೆಯದ್ದು ಎಂದು ಆರೋಪಿ ಬರೆದುಕೊಂಡಿದ್ದ. ವೈದ್ಯರ ಕೊಠಡಿ ಎದುರು ಜನರು ಗುಂಪಾಗಿ ನಿಂತುಕೊಂಡಿದ್ದರು. ಜನಸಂದಣಿಯೂ ಹೆಚ್ಚಿತ್ತು. ಪರಿಶೀಲನೆ ನಡೆಸಿದಾಗ ಇದು ವಿಕ್ಟೋರಿಯಾ ಆಸ್ಪತ್ರೆಯದ್ದು ಅಲ್ಲವೆಂಬುದು ತಿಳಿಯಿತು ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವಿಡಿಯೋ ಪಾಟ್ನಾದ ಏಮ್ಸ್ ನದ್ದು ಎಂದು ವೈದ್ಯಕೀಯ ಸಂಸ್ಥೆ ನಿರ್ದೇಶಕಿ- ಡೀನ್ ಡಾ. ಸಿ. ಆರ್. ಜಯಂತಿ ಸ್ಪಷ್ಪಪಡಿಸಿದ್ದಾರೆ.
ನಕಲಿ ವಿಡಿಯೋ ಹರಿಬಿಟ್ಟವನ ಬಂಧನ
Follow Us