Wednesday, March 3, 2021

ಮೊಬೈಲ್ ಚಾರ್ಜಿಂಗ್ ನೆಪದಲ್ಲಿ ಬಟ್ಟೆ ಬದಲಿಸುವ ವೈದ್ಯರ ವಿಡಿಯೋ ಮಾಡುತ್ತಿದ್ದವನ ಬಂಧನ

newsics.com
ಬೆಂಗಳೂರು: ಮೊಬೈಲ್’ಗೆ ಚಾರ್ಜ್ ಮಾಡುವ ನೆಪದಲ್ಲಿ ನೆಪದಲ್ಲಿ ಡಾಕ್ಟರ್ ಡ್ರೆಸ್ ಚೇಂಜ್ ಮಾಡುವ ವಿಡಿಯೋ ಸೆರೆಹಿಡಿಯುತ್ತಿದ್ದ ವಿಕೃತ ಕಾಮಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ ಆಸ್ಪತ್ರೆಯಲ್ಲಿ ಡಾಕ್ಟರ್ ಮತ್ತು ಸ್ಟಾಫ್ ನರ್ಸ್ ಬಟ್ಟೆ ಬದಲಾಯಿಸುವುದನ್ನು ಮೊಬೈಲ್’ನಲ್ಲಿ ಗುಪ್ತವಾಗಿ ಸೆರೆ ಹಿಡಿಯುತ್ತಿದ್ದ ಗುತ್ತಿಗೆ ನೌಕರ ಮಾರುತೇಶ್’ನನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.
ಸರ್ಕಾರಿ ಅಸ್ಪತ್ರೆಯೊಂದರ ವೈದ್ಯೆ ನೀಡಿದ ದೂರಿನ ಮೇರೆಗೆ ಮಾರುತೇಶ್’ನನ್ನು ಬಂಧಿಸಲಾಗಿದೆ. ಆಪರೇಷನ್ ಮಾಡುವ ಮುನ್ನ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವುದನ್ನೇ ಈತ ಕಾಯುತ್ತಿದ್ದ. ಬಟ್ಟೆ ಬದಲಾಯಿಸಲು ಬಂದಾಗ ಆಗಮಿಸುತ್ತಿದ್ದ ಆರೋಪಿ ಚಾರ್ಜಿಂಗ್ ನೆಪದಲ್ಲಿ‌ ಮೊಬೈಲ್ ಇಟ್ಟು ವಿಡಿಯೋ ಮಾಡಿಕೊಳ್ಳುತ್ತಿದ್ದ.
ಇತ್ತೀಚೆಗೆ ಮಹಿಳಾ ಡಾಕ್ಟರ್ ಬಟ್ಟೆ ಬದಲಾಯಿಸುವಾಗ ಚಾರ್ಜಿಂಗ್ ಹಾಕಿದ್ದ ಮೊಬೈಲ್  ಗಮನಿಸಿದ್ದು, ಅನುಮಾನಗೊಂಡು ಪರಿಶೀಲಿಸಿದಾಗ ರೆರ್ಕಾಡಿಂಗ್ ಮೋಡ್’ನಲ್ಲಿ ಇರುವುದು ಬೆಳಕಿಗೆ ಬಂದಿದೆ.

ಮತ್ತಷ್ಟು ಸುದ್ದಿಗಳು

Latest News

ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಐಷಾರಾಮಿ ಹೋಟೆಲ್!

newsics.comವಾಷಿಂಗ್ಟನ್‌: ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಇಡ್ಲಿ, ಟೀ, ಕಾಫಿ ಸಿಗಬಹುದು.ಮುಂದಿನ 4 ವರ್ಷದಲ್ಲಿ ಅಂತರಿಕ್ಷದಲ್ಲಿ  “ವೊಯೇಜರ್‌ ಸ್ಟೇಷನ್‌’ ಎಂಬ ವೈಭವೋಪೇತ ಹೋಟೆಲೊಂದು...

ಮನೆಯಲ್ಲೇ ಲಸಿಕೆ ಪಡೆದ ಕೃಷಿ ಸಚಿವ; ವರದಿ ಕೇಳಿದ ಕೇಂದ್ರ

newsics.comನವದೆಹಲಿ: ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಇಂದು(ಮಾ.2) ತಮ್ಮ ಮನೆಯಲ್ಲೇ ಕೊರೋನಾ ಲಸಿಕೆ ಹಾಕಿಸಿಕೊಂಡಿರುವುದು ವಿವಾದಕ್ಕೆಡೆ ಮಾಡಿದೆ.ನರ್ಸ್ಗಳನ್ನು ಮನೆಗೆ ಕರೆಸಿಕೊಂಡು ಸಚಿವ ಬಿ.ಸಿ.ಪಾಟೀಲ್ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದು,...

ದಿನೇಶ್ ಕಲ್ಲಹಳ್ಳಿ ಯಾರೆಂದೇ ತಿಳಿದಿಲ್ಲ, ತನಿಖೆ ನಡೆಯಲಿ-ಸಚಿವ ರಮೇಶ್ ಜಾರಕಿಹೊಳಿ

newsics.com ಬೆಂಗಳೂರು: ಕಳೆದ 21 ವರ್ಷದಿಂದ ನಾನು ಶಾಸಕನಾಗಿ ಆಯ್ಕೆಯಾಗುತ್ತಿದ್ದೇನೆ. ದಿನೇಶ್ ಕಲ್ಲಹಳ್ಳಿಯಾಗಲೀ ಯುವತಿಯಾಗಲಿ ಯಾರೆಂದು ತನಗೆ ತಿಳಿದಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ‌ಹೇಳಿಕೆ ನೀಡಿದ್ದಾರೆ. ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ ವಿಡಿಯೋ...
- Advertisement -
error: Content is protected !!