newsics.com
ಬೆಂಗಳೂರು: ರಂಗಭೂಮಿ ಕಲಾವಿದ ಹಾಗೂ ವಾಸ್ತು ಶಿಲ್ಪದ ಬಗ್ಗೆ ಪರಿಣಿತರಾಗಿದ್ದ ಎಸ್ ಜಿ ಶಂಕರಮೂರ್ತಿ ಇನ್ನಿಲ್ಲ. ಕೊರೋನಾ ಸೋಂಕಿನಿಂದಾಗಿ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 68 ವರ್ಷ ಪ್ರಾಯವಾಗಿತ್ತು. ಬೆಂಗಳೂರಿನಲ್ಲಿ ಕನ್ನಡ ವರ ನಟ ಡಾ. ರಾಜ್ ಕುಮಾರ್ ಅವರ ನಿವಾಸದ ವಾಸ್ತು ಶಿಲ್ಪ ಜವಾಬ್ದಾರಿಯನ್ನು ಇವರು ನಿರ್ವಹಿಸಿದ್ದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾಗಿದ್ದ ಶಂಕರ ಮೂರ್ತಿ ರಂಗಭೂಮಿ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು. ಹಲವು ಹೊಸ ಪ್ರತಿಭೆಗಳನ್ನು ರಂಗಭೂಮಿಗೆ ಪರಿಚಯಿಸಿದ್ದರು.