newsics.com
ಬೆಂಗಳೂರು: ವಾಹನ ಚಲಾಯಿಸುವ ವೇಳೆ ಮಾತಿನ ಚಕಮಕಿ ನಡೆದ ಬಳಿಕ ಆಡಿ ಕಾರು ಚಾಲಕನೊಬ್ಬ ದ್ವಿಚಕ್ರ ವಾಹನ ಸವಾರನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಎಂ ಎಸ್ ರಾಮಯ್ಯ ಕಾಲೇಜು ಬಳಿ ಈ ಘಟನೆ ಸಂಭವಿಸಿದೆ.
ದ್ವಿ ಚಕ್ರ ಸವಾರ ಅನಿಲ್ ಕುಮಾರ್ ಗುಂಡೇಟಿನಿಂದ ಪಾರಾಗಿದ್ದಾರೆ. ಆರೋಪಿ ಕಾರು ಚಾಲಕ ಪರಾರಿಯಾಗಿದ್ದಾನೆ.
ಮಾತಿನ ಚಕಮಕಿ ಬಳಿಕ ಆರೋಪಿ ದ್ವಿ ಚಕ್ರವಾಹನ ಸವಾರನನ್ನು ಗುರಿಯಾಗಿರಿಸಿಕೊಂಡು ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ.