ಮಂಗಳೂರು: ಲೇಖಕ, ಕತೆಗಾರ ಫಕ್ರುದ್ದೀನ್ ಇರುವೈಲ್ (57) ಶನಿವಾರ ರಾತ್ರಿ ಕೊನೆಯುಸಿರೆಳೆದರು.
ಫಕ್ರುದ್ದೀನ್ ಅವರು ಮೂಡುಬಿದಿರೆ ಸಮೀಪದ ಇರುವೈಲಿನ ಸ್ವಗೃಹದಲ್ಲಿ ನಿಧನರಾದರು. ಕನ್ನಡ, ಬ್ಯಾರಿ ಕತೆ, ಕಾದಂಬರಿಗಳನ್ನು ಬರೆದಿರುವ ಅವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪುರಸ್ಕಾರ, ಮುಸ್ಲಿಂ ಲೇಖಕರ ಸಂಘದ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು. ಮೃತರಿಗೆ ಪತ್ನಿ, ಮೂವರು ಪುತ್ರಿಯರಿದ್ದಾರೆ.
ಕತೆಗಾರ ಫಕ್ರುದ್ದೀನ್ ಇರುವೈಲ್ ನಿಧನ
Follow Us