newsics.com
ಬೆಂಗಳೂರು: 22ರ ಹರೆಯದ ಯುವತಿಯೊಬ್ಬಳು ಬೆಂಗಳೂರಿನ ಆಸ್ಪತ್ರೆಯೊಂದರ ಟಾಯ್ಲೆಟ್ ನಲ್ಲಿ ಮಗುವಿಗೆ ಜನ್ಮ ನೀಡಿ ಬಳಿಕ ಮಗುವನ್ನು ಹೊರಗಡೆ ಬಿಸಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹೊಟ್ಟೆ ನೋವು ಎಂದು ಹೇಳಿ ಯುವತಿ ಮತ್ತು ಆಕೆಯ ಪ್ರಿಯಕರ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು ಎಂದು ವರದಿಯಾಗಿದೆ.
ಮಗಳು ಗರ್ಭಿಣಿಯಾಗಿರುವುದು ಅವರ ಕುಟುಂಬ ಸದಸ್ಯರಿಗೆ ತಿಳಿದಿರಲಿಲ್ಲ ಎಂದು ಹೇಳಲಾಗಿದೆ. ಅಕ್ರಮ ಸಂಬಂಧದಿಂದ ಮಗು ಜನಿಸಿದ ಕಾರಣ ಮಗುವನ್ನು ಯುವತಿ ಬಿಸಾಡಿದ್ದಾಳೆ ಎಂದು ವರದಿಯಾಗಿದೆ.