newsics.com
ಇಂದು ಕೊಲೆಯಾಗಿರುವ ಗುರೂಜಿ ಮೂಲತಃ ಬಾಗಲಕೋಟೆಯವರು. ಇವರ ಮೂಲ ಹೆಸರು ಚಂದ್ರಶೇಖರ್ ವಿರುಪಾಕ್ಷಪ್ಪ ಅಂಗಡಿ . ಬಾಗಲಕೋಟೆಯಲ್ಲಿಯೇ ಇಂಜಿನಿಯರಿಂಗ್ವರೆಗೂ ಓದಿದ್ದ ಚಂದ್ರಶೇಖರ್ ಗುರೂಜಿ ಬಳಿಕ 1988ರಲ್ಲಿ ಮುಂಬೈ ದಾರಿ ಹಿಡಿದಿದ್ದರು.
ಮುಂಬೈನಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡ್ತಿದ್ದ ಚಂದ್ರಶೇಖರ್ ಗುರೂಜಿ ಆರು ವರ್ಷಗಳ ಬಳಿಕ ಮುಂಬೈನಿಂದ ಸಿಂಗಾಪುರಕ್ಕೆ ತೆರಳಿ ವಾಸ್ತು ಶಾಸ್ತ್ರ ಅಧ್ಯಯನ ಮಾಡಿ ಬಳಿಕ ಮುಂಬೈಗೆ ಬಂದು ಸರಳ ವಾಸ್ತು ಕಚೇರಿ ಆರಂಭಿಸುತ್ತಾರೆ. ಬಳಿಕ ಹುಬ್ಬಳ್ಳಿ, ಬೆಂಗಳೂರು ಹೀಗೆ ರಾಜ್ಯದ ವಿವಿಧೆಡೆಯಲ್ಲಿ ಶಾಖೆ ತೆರೆಯುತ್ತಾ ಹೋಗುತ್ತದೆ.
ಮೊದಲ ಪತ್ನಿಯ ಮರಣದ ಬಳಿಕ ಮತ್ತೊಂದು ಮದುವೆಯಾಗುತ್ತಾರೆ. ಮೊದಲ ಪತ್ನಿಗೆ ಓರ್ವ ಪುತ್ರಿಯಿದ್ದಾರೆ. ಆದರೆ ಎರಡನೇ ದಾಂಪತ್ಯದಿಂದ ಇವರಿಗೆ ಮಕ್ಕಳಿರಲಿಲ್ಲ. ಶಿವಮೊಗ್ಗ ಜಿಲ್ಲೆ ಮಂಡಗದ್ದೆ ಸಮೀಪದ ಹೆಮ್ಮಕ್ಕಿ ಗ್ರಾಮದ ಅಂಕಿತಾರನ್ನು ಎರಡನೇ ಮದುವೆಯಾಗಿದ್ದರು. ಸಧ್ಯ ಅಂಕಿತಾ ಬೆಂಗಳೂರಿನಲ್ಲಿ ವಾಸವಿದ್ದಾರೆ.