Monday, January 18, 2021

ಬೆಂಗಳೂರು ಲಾಕ್ಡೌನ್; ಮಾವನ ಹೊಲದಲ್ಲಿ ಟೆಂಟ್ ಕ್ವಾರಂಟೈನ್!

ಮಂಡ್ಯ: ಬೆಂಗಳೂರಿನಲ್ಲಿ ಲಾಕ್‌ಡೌನ್‌ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಲಸಿಗರು ತವರಿಗೆ ಮರಳುತ್ತಿದ್ದಾರೆ. ತಾಲ್ಲೂಕಿನ ಕಿರಗಂದೂರು ಗ್ರಾಮದ ಇಬ್ಬರು ಅಳಿಯಂದಿರು ಕುಟುಂಬ ಸಮೇತ ಮಾವನ ಹೊಲದಲ್ಲಿ ಟೆಂಟ್‌ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿರುವ ಕಾರಣ ಎರಡೂ ಕುಟುಂಬ ಸದಸ್ಯರು ಮಕ್ಕಳೊಂದಿಗೆ ಬಂದು ಜುಲೈ 12 ರಿಂದ ಹೊಲದಲ್ಲಿ ಟೆಂಟ್‌ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಸೀಮೆಎಣ್ಣೆ ಸ್ವೌ ಇಟ್ಟುಕೊಂಡು ಅಡುಗೆ ಮಾಡಿಕೊಳ್ಳುತ್ತಿದ್ಧಾರೆ. ಮದ್ದೂರು ತಾಲ್ಲೂಕು ಕರ್ಕಳ್ಳಿ ಗ್ರಾಮದ ಸ್ವಾಮಿ ಅವರು ಕಿರಗಂದೂರು ಗ್ರಾಮದ ಸಂಧ್ಯಾರಾಣಿ ಅವರನ್ನು ವಿವಾಹವಾಗಿದ್ದಾರೆ. ಕೆಂಗೇರಿಯ ಶ್ರೀರಾಮ್‌ ಅವರು ಸಂಧ್ಯಾರಾಣಿ ಸಹೋದರಿ ಶೋಭಾರಾಣಿ ಅವರನ್ನು ಮದುವೆಯಾಗಿದ್ದಾರೆ. ಸ್ವಾಮಿ ಬೆಂಗಳೂರಿನಲ್ಲಿ ಆಟೊ ಓಡಿಸುತ್ತಿದ್ದರೆ, ಶ್ರೀರಾಮ್‌ ಟ್ಯಾಕ್ಸಿ ಓಡಿಸುತ್ತಿದ್ದರು.
‘ನಾವು ಬೆಂಗಳೂರಿನಿಂದ ಬಂದಿರುವ ಕಾರಣ ಜನರು ಅನುಮಾನದಿಂದ ನೋಡುತ್ತಾರೆ. ಯಾರಿಗೂ ತೊಂದರೆ ಕೊಡುವುದು ಬೇಡ ಎಂಬ ಕಾರಣಕ್ಕೆ ಮಾವನ ಹೊಲದಲ್ಲೇ ವಾಸ ಮಾಡುತ್ತಿದ್ದೇವೆ. 15 ದಿನ ಇಲ್ಲೇ ಇದ್ದು ಮನೆಗೆ ತೆರಳುತ್ತೇವೆ. ಕಳೆದ ಮೂರು ತಿಂಗಳಿಂದ ಮನೆಯ ಒಳಗೇ ಇದ್ದು ತುಂಬಾ ಬೇಸರವಾಗಿತ್ತು. ಈಗ ಸುಂದರ ಪರಿಸರದಲ್ಲಿ ವಾಸ ಮಾಡುತ್ತಿರುವುದು ಸಂತಸ ತಂದಿದೆ’ ಎಂದು ಸ್ವಾಮಿ ಹೇಳಿದರು.

ಮತ್ತಷ್ಟು ಸುದ್ದಿಗಳು

Latest News

ಜ.21ಕ್ಕೆ ವಿಚಾರಣೆಗೆ ಹಾಜರಾಗಲು ಫೇಸ್‌ಬುಕ್, ಟ್ವಿಟರ್’ಗೆ ಸೂಚನೆ

newsics.com ನವದೆಹಲಿ: ಸಾಮಾಜಿಕ ಜಾಲತಾಣಗಳ ದುರುಪಯೋಗ ಮಾಡಿಕೊಂಡ ಆರೋಪ ಹಿನ್ನೆಲೆಯಲ್ಲಿ ಜ.21 ರಂದು ಫೇಸ್‌ಬುಕ್ ಮತ್ತು ಟ್ವಿಟರ್ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮಿತಿ...

ಬೆಂಗಳೂರಿನಲ್ಲಿ 464, ರಾಜ್ಯದಲ್ಲಿ 745 ಮಂದಿಗೆ ಕೊರೋನಾ ಸೋಂಕು, ನಾಲ್ವರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿಂದು(ಜ.17) ಹೊಸದಾಗಿ 745 ಮಂದಿಗೆ ಕೊರೋನಾ ಸೋಂಕು ತಗುಲಿದೆ. 855 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 911232 ಕ್ಕೆ ಏರಿಕೆಯಾಗಿದೆ.ಸೋಂಕಿನಿಂದ...

ದೇಶಾದ್ಯಂತ 17,072 ಜನರಿಗೆ ಕೊರೋನಾ ಲಸಿಕೆ

nedwsics.com ನವದೆಹಲಿ: ಕೋವಿಶೀಲ್ಡ್ ಲಸಿಕೆಯ ಸಾರ್ವತ್ರಿಕ ನೀಡಿಕೆ ಭಾನುವಾರವೂ (ಜ.17) ಮುಂದುವರೆಯಿತು. 6 ರಾಜ್ಯಗಳಲ್ಲಿ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಡಾ.ಮನೋಹರ್ ಅಗ್ನಾನಿ ಹೇಳಿದ್ದಾರೆ.ಇಂದು ಒಟ್ಟು...
- Advertisement -
error: Content is protected !!