Tuesday, May 24, 2022

ಬೆಂಗಳೂರು ಗಲಭೆ; NIAನಿಂದ ಪ್ರಮುಖ ಆರೋಪಿ ಸೈಯದ್ ಬಂಧನ

Follow Us

newsics.com
ಬೆಂಗಳೂರು: ನಗರದ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಉಗ್ರರ ನಂಟು ಕುರಿತು ತನಿಖೆ ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಗುರುವಾರ 32 ಕಡೆ ದಾಳಿ ನಡೆಸಿದ್ದು, ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸೈಯದ್ ಸಾಧಿಕ್ ಅಲಿ ಯನ್ನು ಬಂಧಿಸಿದೆ.
ಗುರುವಾರ ಬೆಳಗ್ಗೆ 9 ರಿಂದಲೇ ಕಾರ್ಯಾಚರಣೆ ಆರಂಭಿಸಿದ ಎನ್‌ಐಎ ಅಧಿಕಾರಿಗಳು ಪುಲಿಕೇಶಿನಗರದಲ್ಲಿನ ಎಸ್‌ಡಿಪಿಐ/ಪಿಎಐಗೆ ಸೇರಿದ 3 ಕಚೇರಿಗಳು, ಬೆಂಗಳೂರು ಘಟಕ ಕಾರ್ಯದರ್ಶಿ, ಗಲಭೆ ಕೇಸಿನ ಪ್ರಮುಖ ಆರೋಪಿ ಸೈಯದ್ ಮುಜಾಮಿಲ್ ಮನೆ ಸೇರಿದಂತೆ ಇತರೆಡೆ ಎನ್‌ಐಎ ಅಧಿಕಾರಿಗಳು ಶೋಧ ನಡೆಸಿದರು. ಏರ್‌ಗನ್, ಗುಂಡುಗಳು, ಮಾರಕಾಸಗಳು, ರಾಡ್‌ಗಳು, ಡಿಜಿಟಲ್ ಡಿವೈರ್ಸ್, ಡಿವಿಆರ್ ಮತ್ತು ಎಸ್‌ಡಿಪಿಐ/ಪಿಎಐಗೆ ಸೇರಿದ ದಾಖಲೆ ಪತ್ರಗಳನ್ನು ಜಪ್ತಿ ಮಾಡಿರುವುದಾಗಿ ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪುಲಿಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಹೋದರ ಸಂಬಂಧಿ ನವೀನ್ ಆ.11ರಂದು ಫೇಸ್​​​ಬುಕ್​​​​‌ನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದ. ಅಂದು ರಾತ್ರಿ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್ ‌ಭೈರಸಂದ್ರದಲ್ಲಿ ಗಲಭೆ ನಡೆದಿತ್ತು. ಇದರ ಹಿಂದೆ ಉಗ್ರರ ನಂಟು ಇರುವ ಬಗ್ಗೆ ಶಂಕೆ ಹಿನ್ನೆಲೆಯಲ್ಲಿ ಎನ್‌ಐಎ ತನಿಖೆ ಕೈಗೊಂಡು ಸೆ.22ರಂದು 2 ಎಫ್​​ಐಆರ್​​ ದಾಖಲಿಸಿತ್ತು.

ಮತ್ತಷ್ಟು ಸುದ್ದಿಗಳು

Latest News

ಬಸ್ ನಿಲ್ದಾಣದಲ್ಲಿ ಮಗು ಸಿಕ್ಕ ಪ್ರಕರಣಕ್ಕೆ ಟ್ವಿಸ್ಟ್ : ತನಿಖೆಯಲ್ಲಿ ಬಯಲಾಯ್ತು ಅಕ್ರಮ ಸಂಬಂಧದ ಅಸಲಿಯತ್ತು

newsics.com ಮೈಸೂರು: ಕಳೆದ 15 ದಿನಗಳ ಹಿಂದೆ ರಾಯಚೂರಿನ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಯುವಕನ ಕೈಗೆ ಮಗುವನ್ನು ಕೊಟ್ಟು ಪರಾರಿಯಾದ ಪ್ರಕರಣ ಇದೀಗ ಹೊಸ ತಿರುವನ್ನೇ ಪಡೆದುಕೊಂಡಿದೆ....

ಪ್ರವಾಸಿಗರನ್ನು ಸ್ಕೂಬಾ ಡೈವಿಂಗ್ ಗೆ ಹೊತ್ತೊಯ್ದ ದೋಣಿ ಮುಳುಗಡೆ; ಇಬ್ಬರು ಸಾವು

newsics.com ಮಹಾರಾಷ್ಟ್ರ: ಸ್ಕೂಬಾ ಡೈವಿಂಗ್ ವೇಳೆ 20 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯು ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲದೇ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಾರಾಷ್ಟ್ರದ...

ತಮ್ಮ ಪಾಠ ಸೇರ್ಪಡೆಗೆ ಅನುಮತಿ ನಿರಾಕರಿಸಿದ ಲೇಖಕ ದೇವನೂರ ಮಹಾದೇವ

newsics.com ಮೈಸೂರು: 'ನನ್ನ ಪಾಠ ಸೇರಿದ್ದರೆ ಕೂಡಲೇ ಕೈ ಬಿಡಬೇಕು' ಎಂದು ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿರುವ ಲೇಖಕ ದೇವನೂರ ಮಹಾದೇವ ತಮ್ಮ ಪಾಠ ಸೇರ್ಪಡೆಗೆ ಅನುಮತಿ ನಿರಾಕರಿಸಿದ್ದಾರೆ. 'ನನ್ನದೊಂದು ಕಥನವನ್ನು ಹತ್ತನೇ ತರಗತಿ...
- Advertisement -
error: Content is protected !!