ಬೆಂಗಳೂರು: ನಗರದ ಕೆ ಜಿ. ಹಳ್ಳಿ ಮತ್ತು ಡಿ . ಜೆ. ಹಳ್ಳಿಯಲ್ಲಿ ನಡೆದ ಹಿಂಸಾಚಾರ ಕುರಿತ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಎರಡು ಪೊಲೀಸ್ ಠಾಣಾ ವ್ಯಾಪ್ತಿಯ 12 ಪ್ರದೇಶಗಳಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿದೆ.
ತನಿಖೆಯ ನಿಟ್ಟಿನಲ್ಲಿ ಮಹತ್ವದ ದಾಖಲೆ ಸಂಗ್ರಹಿಸಲು ಎನ್ ಐ ಎ ಈ ದಾಳಿ ನಡೆಸಿದೆ. ಡಿಐಜಿ ದರ್ಜೆಯ ಅಧಿಕಾರಿಗಳೇ ಈ ದಾಳಿಗೆ ನೇತೃತ್ವ ನೀಡಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎರಡು ಎಫ್ ಐ ಆರ್ ಗಳ ಬಗ್ಗೆ ಮಾತ್ರ ಎನ್ ಐ ಎ ತನಿಖೆ ನಡೆಸುತ್ತಿದೆ. ಈ ಗಲಭೆ ಒಂದು ವ್ಯವಸ್ಥಿತ ಸಂಚಿನ ಭಾಗವಾಗಿತ್ತೆ ಮತ್ತು ಇದಕ್ಕೆ ಆರ್ಥಿಕ ಮೂಲ ಯಾವುದು ಎಂಬ ಬಗ್ಗೆ ಎನ್ ಐ ಎ ಗಮನ ಕೇಂದ್ರೀಕರಿಸಲಿದೆ.
ರಾಜ್ಯದ ಹೊರಗಿನ ಕೆಲವು ಶಕ್ತಿಗಳು ರಿಮೋಟ್ ಕಂಟ್ರೋಲ್ ಮಾದರಿಯಲ್ಲಿ ಈ ಗಲಭೆ ಹುಟ್ಟು ಹಾಕಿರುವ ಶಂಕೆ ಕೂಡ ವ್ಯಕ್ತವಾಗಿದೆ. ರಾಜ್ಯ ಪೊಲೀಸರ ನಿಕಟ ಸಹಕಾರದೊಂದಿಗೆ ಎನ್ ಐ ಎ ತನಿಖೆ ಮುಂದುವರಿಸಲಿದೆ