newsics.com
ಬೆಂಗಳೂರು: ನಗರದ ಕೆ ಜಿ. ಹಳ್ಳಿ ಮತ್ತು ಡಿ . ಜೆ. ಹಳ್ಳಿಯಲ್ಲಿ ನಡೆದ ಹಿಂಸಾಚಾರ ಕುರಿತ ತನಿಖೆಗೆ ಮುಂದಾಗಿರುವ ರಾಷ್ಟ್ರೀಯ ತನಿಖಾ ದಳ ತನ್ನ ಕಾರ್ಯ ಆರಂಭಿಸಿದೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಕೂಡ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.
ನಗರದ ಗಲಭೆಗೆ ತುತ್ತಾಗಿದ್ದ ಪ್ರದೇಶಗಳಿಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಗಲಭೆಯ ಹಿಂದೆ ಭಯೋತ್ಪಾದನಾ ಸಂಘಟನೆಗಳ ಕೈವಾಡ ಇದೆಯೇ ಮತ್ತು ಆರ್ಥಿಕ ಮೂಲ ಯಾವುದು ಎಂಬ ವಿಷಯದ ಕುರಿತು ಎನ್ ಐ ಎ ಗಮನ ಹರಿಸಲಿದೆ.
ಗಲಭೆಯ ಕುರಿತು ಈಗಾಗಲೇ ಸಿಸಿಬಿ ಪೊಲೀಸರು ಮತ್ತು ವಿಶೇಷ ತಂಡ ತನಿಖೆ ನಡೆಸಿದ್ದು, ಎನ್ ಐ ಎ ಅಧಿಕಾರಿಗಳು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಕೂಡ ಸಮಾಲೋಚನೆ ನಡೆಸಲಿದ್ದಾರೆ.
ಮಾದಕ ದ್ರವ್ಯದ ಕಂಪನ: ದೀಪಿಕಾ ಪಡುಕೋಣೆ ಮ್ಯಾನೇಜರ್ ಗೆ ಎನ್ ಸಿ ಬಿ ನೋಟಿಸ್