newsics.com
ಬೆಂಗಳೂರು: ದಿಢೀರ್ ಸಾಲ ನೀಡುವ ಮೊಬೈಲ್ ಆ್ಯಪ್ ಮೂಲಕ 40 ಲಕ್ಷ ರೂಪಾಯಿ ಸಾಲ ಪಡೆದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಅದನ್ನು ತೀರಿಸುವ ಸಂಬಂಧ ಬ್ಯಾಂಕ್ ದರೋಡೆ ನಡೆಸಿ ಪೊಲೀಸರ ಅತಿಥಿಯಾಗಿದ್ದಾನೆ..
ಬಂಧಿತ ವಿದ್ಯಾರ್ಥಿಯನ್ನು ಧೀರಜ್ ಎಂದು ಗುರುತಿಸಲಾಗಿದೆ. ಜನವರಿ 14 ರಂದು ಮಡಿವಾಳದ ಎಸ್ ಬಿ ಐ ಶಾಖೆಯಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿತ್ತು.
ಬ್ಯಾಂಕ್ ಮ್ಯಾನೇಜರ್ ಗೆ ಚಾಕು ತೋರಿಸಿ ಬೆದರಿಸಿದ ಆರೋಪಿ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಇದೀಗ ಮಡಿವಳ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಧೀರಜ್ ಮೊಬೈಲ್ ಆ್ಯಪ್ ಮೂಲಕ 40 ಲಕ್ಷ ರೂಪಾಯಿ ಸಾಲ ಪಡೆದಿದ್ದ ಎಂದು ವರದಿಯಾಗಿದೆ.
ದೇಶದಲ್ಲಿ ಹತ್ತು ಸಾವಿರ ದಾಟಿದ ಒಮೈಕ್ರಾನ್ ಸೋಂಕು, ಕೊರೋನಾದಿಂದ ಒಂದೇ ದಿನ 488 ಜನರ ಸಾವು