Saturday, April 17, 2021

ಮೂರೂವರೆ ರೂ. ಸಾಲ ಪಾವತಿಗೆ ಬ್ಯಾಂಕ್ ಒತ್ತಡ, 15 ಕಿಮೀ ನಡೆದ ರೈತ!

ಶಿವಮೊಗ್ಗ: ಸಾಲ ಮರುಪಾವತಿಗೆ ರೈತರ ಮೇಲೆ ಒತ್ತಡ ಹೇರುವಂತಿಲ್ಲ ಎಂಬ ಸರ್ಕಾರದ ಸ್ಪಷ್ಟ ಸೂಚನೆ ಇದ್ದರೂ ಬ್ಯಾಂಕೊಂದು ಬಾಕಿ ಇರುವ 3 ರೂಪಾಯಿ 46 ಪೈಸೆ ಸಾಲ ಮರುಪಾವತಿಗೆ ರೈತನ ಮೇಲೆ ಒತ್ತಡ ಹೇರಿ 15 ಕಿಲೊಮೀಟರ್ ನಡೆಸಿ ಹಿಂಸೆ ನೀಡಿದೆ.
ಇದು ನಡೆದಿರುವುದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲೇ! ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಿಟ್ಟೂರಿನಲ್ಲಿ ಈ ಅಮಾನವೀಯ ಪ್ರಕರಣ ನಡೆದಿದೆ.
ಬ್ಯಾಂಕ್’ನವರ ಧಮಕಿಗೆ ಬೆದರಿದ ರೈತ ಲಕ್ಷ್ಮೀನಾರಾಯಣ ಕೃಷಿ ಸಾಲದ ಬಾಕಿ ಕಟ್ಟುವುದಕ್ಕಾಗಿ ಬರೋಬ್ಬರಿ 15 ಕಿಲೊಮೀಟರ್ ನಡೆದು ಬ್ಯಾಂಕ್ ಸಾಲ ಮರುಪಾವತಿ ಮಾಡಿದ್ದಾರೆ.
ನಡೆದಿದ್ದೇನು…?:
ನಿಟ್ಟೂರಿನ ರೈತ ಲಕ್ಷ್ಮೀನಾರಾಯಣ ಕೆನರಾ ಬ್ಯಾಂಕ್’ನಿಂದ 35 ಸಾವಿರ ಕೃಷಿ ಸಾಲ ಪಡೆದಿದ್ದರು. ಸಾಲಮನ್ನಾ ವೇಳೆ 32 ಸಾವಿರ ಮನ್ನಾ ಆಗಿತ್ತು. ಬಾಕಿ ಉಳಿದ 3 ಸಾವಿರ ರೂಪಾಯಿಯನ್ನು ಬಡ್ಡಿ ಸಮೇತ ಕಳೆದ ತಿಂಗಳೇ ಹಿಂತಿರುಗಿಸಿದ್ದರು ಎನ್ನಲಾಗಿದೆ‌. ಆದರೂ ಶುಕ್ರವಾರ (ಜೂನ್ 26) ಮತ್ತೆ ರೈತ ಲಕ್ಷ್ಮೀನಾರಾಯಣ ಅವರಿಗೆ ಕರೆಮಾಡಿದ ಸಿಬ್ಬಂದಿ ಸಾಲ‌ ಮರುಪಾವತಿ ಮಾಡದೇ ಇದ್ದಲ್ಲಿ ತೊಂದರೆಯಾಗಲಿದೆ ಎಂದು ಹೆದರಿಸಿದ್ದಾರೆ. ‌ಇದರಿಂದ ಗಾಬರಿಗೊಂಡ ರೈತ ಲಕ್ಷ್ಮೀನಾರಾಯಣ, ಎಲ್ಲ ಕೆಲಸ ಬಿಟ್ಟು, ಬಸ್ ಸೌಲಭ್ಯವೂ ಇಲ್ಲದ ತನ್ನ ಗ್ರಾಮದಿಂದ 15 ಕಿಲೋಮೀಟರ್ ನಡೆದುಬಂದು ಬ್ಯಾಂಕ್ ತಲುಪಿ ಸಾಲದ ಮೊತ್ತ 3.46 ಪೈಸೆ ತುಂಬಿ ನಿಟ್ಟುಸಿರುಬಿಟ್ಟಿದ್ದಾರೆ.
ಕೆನರಾ ಬ್ಯಾಂಕ್ ಸಿಬ್ಬಂದಿ ಪ್ರಕಾರ, ಬ್ಯಾಂಕ್‌ನಲ್ಲಿ ಆಡಿಟ್ ನಡೆದಿದ್ದು, ಅವರ ಸಾಲ ರಿನೀವಲ್‌ ಮಾಡಲು ಸಹಿ ಅಗತ್ಯವಿತ್ತು. ಅದಕ್ಕಾಗಿ ತುರ್ತಾಗಿ‌ ಕರೆಸಿಕೊಂಡಿದ್ದೇವೆ ಎಂದಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಕುಂಭಮೇಳದ ಪ್ರಧಾನ ಸಾಧು ಕೊರೋನಾಗೆ ಬಲಿ

newsics.com ಹರಿದ್ವಾರ: ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಸಾಧು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ...

ಬೆಂಗಳೂರು ವಿವಿ ಪರೀಕ್ಷೆಗಳು‌ ಮುಂದೂಡಿಕೆ

newsics.com ಬೆಂಗಳೂರು: ಕೊರೋನಾ ಅಬ್ಬರ ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ...

ಪಂಜಾಬ್ ವಿರುದ್ಧ ಚೆನ್ನೈಗೆ ಸುಲಭದ ಗೆಲುವು

newsics.com ಮುಂಬೈ: ಐಪಿಎಲ್ 2021ರ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲರ್ಗಳ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು. ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗೆಲುವು ಗಳಿಸಿದೆ. 106 ರನ್ಗಳ...
- Advertisement -
error: Content is protected !!