newsics.com
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಶೀಘ್ರದಲ್ಲೇ ಗ್ರೇಟರ್ ಬೆಂಗಳೂರು ಎನಿಸಿಕೊಳ್ಳಲಿದೆ.
ಜತೆಗೆ ಮೇಯರ್ ಅಧಿಕಾರಾವಧಿ ಒಂದು ವರ್ಷದಿಂದ ಎರಡೂವರೆ ವರ್ಷಕ್ಕೆ ಏರಿಕೆಯಾಗಲಿದೆ.
ಬಿಬಿಎಂಪಿ ಕಾಯ್ದೆ ಪರಿಶೀಲನಾ ಸಮಿತಿ ಅಧ್ಯಕ್ಷ ರಘು ಅವರು ಈ ಮಾಹಿತಿ ನೀಡಿದ್ದು, 198 ವಾರ್ಡ್‍ಗಳಿದ್ದ ಬಿಬಿಎಂಪಿ 250 ವಾರ್ಡ್‍ಗಳ ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿದೆ. ಬಿಬಿಎಂಪಿಗೆ ಹೊಸದಾಗಿ 52 ವಾರ್ಡ್‍ಗಳ ಸೇರ್ಪ ಡೆಗೆ ಶಿಫಾರಸು ಮಾಡಲಾಗಿದೆ. 12 ಸ್ಥಾಯಿ ಸಮಿತಿಗಳ ಬದಲಾಗಿ 8 ಸ್ಥಾಯಿ ಸಮಿತಿ ಮಾಡಲು ನಿರ್ಧಾರ ಮಾಡಲಾಗಿದೆ. ಯಾವುದೇ ಹೊಸ ಪ್ರದೇಶಗಳನ್ನು ಸೇರಿಸದಂತೆ ಈಗಿರುವ ಬಿಬಿಎಂಪಿ ವಿಸ್ತೀರ್ಣದಲ್ಲೇ ವಾರ್ಡ್‍ಗಳನ್ನು ವಿಂಗಡಣೆ ಮಾಡಲಾಗುವುದು ಎಂದು
ವಿಧಾನಸೌಧದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಯಾವ ಉದ್ದೇಶವೂ ನಮ್ಮ ಮುಂದೆ ಇಲ್ಲ. ಸ್ಥಳೀಯ ಸಂಸ್ಥೆಗಳ ವಿಸ್ತೀರ್ಣದಲ್ಲಿ ಭಾರತದ ಅತಿದೊಡ್ಡ ಸ್ಥಳೀಯ ಸಂಸ್ಥೆಯಾಗಿ ಬಿಬಿಎಂಪಿ ಹೊರಹೊಮ್ಮಲಿದೆ ಎಂದು ರಘು ಹೇಳಿದರು.
ಮಾದಕ ವಸ್ತು ಮಾರುತ್ತಿದ್ದ ಐವರು ವಿದ್ಯಾರ್ಥಿಗಳ ಬಂಧನ
ಬೆಂಗಳೂರಿನಲ್ಲಿ 3733, ರಾಜ್ಯದಲ್ಲಿ 6974 ಮಂದಿಗೆ ಕೊರೋನಾ, 83 ಜನರು ಸಾವು