newsics.com
ಬೆಂಗಳೂರು: ನಗರದಲ್ಲಿ ಕೊರೋನಾ ಮೂರನೇ ಅಲೆಯ ಆತಂಕ ಎದುರಾದ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ‘ವೈದ್ಯರ ನಡೆ ಮನೆ ಬಾಗಿಲಿನ ಕಡೆ’ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಸೋಮವಾರದಿಂದ (ಆ.16) ಮನೆಮನೆಗೆ ತೆರಳಿ ಕೊರೋನಾ ಟೆಸ್ಟ್ ಮಾಡಲಾಗುತ್ತದೆ.
ಪ್ರತೀ ವಾರ್ಡ್ಗೆ 5 ವೈದ್ಯಕೀಯ ಸಿಬ್ಬಂದಿ ಇರುವ ತಂಡವೊಂದನ್ನು ನಿಯೋಜನೆ ಮಾಡಲಾಗುತ್ತದೆ. ಒಂದು ವೈದ್ಯಕೀಯ ತಂಡ ಪ್ರತಿನಿತ್ಯ ಕನಿಷ್ಠ 50 ಮನೆಗೆ ಭೇಟಿ ಕೊಡಬೇಕು. ಪ್ರತೀ ತಂಡದಲ್ಲಿ ಓರ್ವ ವೈದ್ಯ, ಸೇರಿ ಮೂರರಿಂದ ನಾಲ್ಕು ಸಿಬ್ಬಂದಿ ಇರಲಿದ್ದಾರೆ.
ಪ್ರತೀ ಮನೆಯಲ್ಲೂ ಎಲ್ಲ ಸದಸ್ಯರಿಗೂ ಕೋವಿಡ್ ಟೆಸ್ಟ್ ನಡೆಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶ ಭೂಕುಸಿತ: ಸಾವಿನ ಸಂಖ್ಯೆ 23ಕ್ಕೇರಿಕೆ, ಇನ್ನೂ 9 ಮಂದಿ ಕಣ್ಮರೆ