newsics.com
ಮದುವೆ ಮನೆಯಲ್ಲಿ ಕನ್ನಡ ಹಾಡು ಹಾಕಿದ್ದಾರೆ ಎಂದು ಕೋಪಗೊಂಡ ಎಂಇಎಸ್ ಪುಂಡರು ವಧು ವರರು ಹಾಗೂ ವರನ ಸಹೋದರನ ಮೇಲೆ ಹಲ್ಲೆ ನಡೆಸಿದ ಘಟನೆಯು ಬೆಳಗಾವಿಯ ಧಾಮನೆ ಎಂಬ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ. ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಎಂಇಎಸ್ ಪುಂಡರು ಬೈಕ್ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.
ಮದುವೆ ಮೆರವಣಿಗೆ ಸಂದರ್ಭದಲ್ಲಿ ಕರುನಾಡೇ.. ಎಂಬ ಗೀತೆಯನ್ನು ಹಾಕಲಾಗಿತ್ತು. ಇದಕ್ಕೆ ಯುವಕರು ಕನ್ನಡದ ಬಾವುಟವನ್ನಿಡಿದು ನರ್ತಿಸುತ್ತಿದ್ದರು. ಇದಕ್ಕೆ ಕೋಪಗೊಂಡ ದುಷ್ಕರ್ಮಿಗಳು ಸಿದ್ದು ಸೈಬಣ್ಣವರ್ ಹಾಗೂ ರೇಷ್ಮಾ ದಂಪತಿ ಮೇಲೆ ಹಾಗೂ ವರನ ಸಹೋದರನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸರು 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.