Saturday, December 10, 2022

BBMP ನಿರ್ಲಕ್ಷ್ಯ- ರಾಜಕಾಲುವೆಗೆ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

Follow Us

newsics.com

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಿವ್ಯ ನಿರ್ಲಕ್ಷ್ಯದಿಂದ ಭಾನುವಾರ ರಾಜಕಾಲುವೆಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ವೆಂಕಟೇಶ್ (31) ಮೃತ ದುರ್ದೈವಿ. ಈತ ಚಿತ್ರದುರ್ಗದ ಕಂಬಾಳು ನಿವಾಸಿ. ದಾಸರಹಳ್ಳಿ ಸಮೀಪದ ರುಕ್ಮಿಣಿನಗರ ಮುಖ್ಯರಸ್ತೆಯಲ್ಲಿ ವೆಂಕಟೇಶ್ ತೆರೆದ ರಾಜಕಾಲುವೆಯಲ್ಲಿ ಕಾಲು ಜಾರಿ ಬಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

3 ತಿಂಗಳ ಹಿಂದೆ ರಾಜಕಾಲುವೆಯಲ್ಲಿನ ಊಳು ತೆಗೆಯುವ ಸಂದರ್ಭದಲ್ಲಿ ರಾಜಕಾಲುವೆಯ ಚಪ್ಪಡಿ ಕಲ್ಲುಗಳನ್ನು ತೆಗೆಯಲಾಗಿತ್ತು. ಕಾಮಗಾರಿ ಮುಗಿದ ಮೇಲೆ ಚಪ್ಪಡಿಗಳನ್ನು ಹಾಕದೇ ಬಿಬಿಎಂಪಿ ನೌಕರರು ಹಾಗೇ ಬಿಟ್ಟು ಹೋಗಿದ್ದರು. ಬಿಬಿಎಂಪಿಯ ಈ ನಿರ್ಲಕ್ಷ್ಯಕ್ಕೆ ವ್ಯಕ್ತಿ ಬಲಿಯಾಗಿದ್ದಾನೆ.

ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಟಿ.ದಾಸರಹಳ್ಳಿ ಬಿಬಿಎಂಪಿ ಕಚೇರಿ ಎದುರು ಶವವಿಟ್ಟು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ.

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ?

ಮತ್ತಷ್ಟು ಸುದ್ದಿಗಳು

vertical

Latest News

16ನೇ ವಯಸ್ಸಿನಲ್ಲಿ ಎಂ ಎ ಪದವಿ :ಹೈದರಾಬಾದ್ ವಿದ್ಯಾರ್ಥಿ ದಾಖಲೆ

newsics.com ಹೈದರಾಬಾದ್: 16ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ಹೈದರಾಬಾದ್ ನ ವಿದ್ಯಾರ್ಥಿ ಹೊಸ ದಾಖಲೆ ಬರೆದಿದ್ದಾನೆ. ಭಾರತದ ಅತ್ಯಂತ ಕಿರಿಯ ಎಂ ಎ ಪದವೀಧರ...

ಮಾಂಡೌಸ್ ಚಂಡಮಾರುತ ಎಫೆಕ್ಟ್: ಚೆನ್ನೈನಲ್ಲಿ ಭಾರೀ ಮಳೆ, ಉರುಳಿದ ಮರಗಳು

newsics.com ಚೆನ್ನೈ:  ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮಾಂಡೌಸ್ ಚಂಡಮಾರುತದ ಪರಿಣಾಮ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವೆಡೆ ಭಾರೀ ಮಳೆಯಾಗುತ್ತಿದೆ.  ಚೆನ್ನೈನ ಎಗ್ಮೋರ್  ಪ್ರದೇಶದಲ್ಲಿ   ಭಾರೀ ಗಾಳಿಯಿಂದಾಗಿ ಹಲವು ಮರಗಳು  ನೆಲಕ್ಕೆ ಅಪ್ಪಳಿಸಿವೆ. ಎಡೆಬಿಡದೆ ಮಳೆ ಸುರಿಯುತ್ತಿದೆ. ...

ಮನೆಗೆ ನುಗ್ಗಿ ಯುವತಿಯ ಅಪಹರಣ, ದಾಂಧಲೆ: 100 ಯುವಕರ ಕೃತ್ಯ

newsics.com ಹೈದರಾಬಾದ್: ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು ಮನೆಗೆ ನುಗ್ಗಿ ಅಪಹರಿಸಲಾಲಿಗೆದ.  ನೂರು ಮಂದಿ ಯುವಕರ ತಂಡ ಮನೆಗೆ ನುಗ್ಗಿ ಮಗಳನ್ನು ಅಪಹರಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಅಪಹರಣಕ್ಕೆ ಒಳಗಾದ ಯುವತಿಯನ್ನು ವೈಶಾಲಿ ಎಂದು...
- Advertisement -
error: Content is protected !!