newsics.com
ಬೆಂಗಳೂರು: ಗ್ರಾಹಕರೊಬ್ಬರಿಗೆ ಸತ್ತ ಜಿರಳೆಯಿದ್ದ ಜಾಮೂನ್ ನೀಡಿದ್ದ ತಪ್ಪಿಗಾಗಿ ದಂಡ ಪಾವತಿಸುವಂತೆ ಬೆಂಗಳೂರಿನ ಹೋಟೆಲ್ವೊಂದಕ್ಕೆ ಕೋರ್ಟ್ ಸೂಚಿಸಿದೆ.
ನೊಂದ ಗ್ರಾಹಕರಿಗೆ 55 ಸಾವಿರ ರೂಪಾಯಿ ಪಾವತಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಪ್ರಕರಣ 2016ರ ವರ್ಷದಲ್ಲಿ ದಾಖಲಾಗಿದ್ದು, ಗ್ರಾಹಕರು ಗಾಂಧಿನಗರ ಪ್ರದೇಶದ ಕಾಮತ್ ಹೋಟೆಲ್ನಲ್ಲಿ ಜಾಮೂನ್ ಆರ್ಡರ್ ಮಾಡಿದ್ದು, ಗ್ರಾಹಕನಿಗೆ ನೀಡಿದ ಬಟ್ಟಲಿನಲ್ಲಿ ಸತ್ತ ಜಿರಳೆ ಕಂಡುಬಂದಿದೆ.
ಈ ಬಗ್ಗೆ ಗ್ರಾಹಕ ರಾಜಣ್ಣ ಪೊಲೀಸರಿಗೆ ಹಾಗೂ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ರೆಸ್ಟೋರೆಂಟ್ ಮಾಲೀಕರು ಎರಡು ವರ್ಷಗಳ ಕಾಲ ನೋಟಿಸ್ʼಗೆ ಪ್ರತಿಕ್ರಿಯೆ ನೀಡಲಿಲ್ಲ, ನಂತರ ನ್ಯಾಯಾಧೀಶರು ಸೇವೆಯಲ್ಲಿನ ಕೊರತೆಯ ಆಧಾರದ ಮೇಲೆ ಸಂತ್ರಸ್ತ ರಾಜಣ್ಣಗೆ 55,000 ರೂ. ಪಾವತಿವಂತೆ ಆದೇಶ ಹೊರಡಿಸಿದ್ದಾರೆ.
ಈ ಆದೇಶದ ವಿರುದ್ಧ ಕಾಮತ್ ಹೋಟೆಲ್ ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿತು. ನ್ಯಾಯಾಧೀಶರು ರೆಸ್ಟೋರೆಂಟ್ ವಾದವನ್ನು ಒಪ್ಪದೆ ಜಿಲ್ಲಾ ಗ್ರಾಹಕರ ವೇದಿಕೆಯ ಆದೇಶವನ್ನು ಎತ್ತಿ ಹಿಡಿದಿದ್ದಾರೆ.