newsics.com
ಬೆಂಗಳೂರು: ಬೆಂಗಳೂರಿನ ಮಾರ್ಕೆಟ್ ಫ್ಲೈಓವರ್ನಲ್ಲಿ ಹಣ ಎಸೆದ ವ್ಯಕ್ತಿ ಈ ಕುರಿತಾಗಿ ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ.
ಈ ಪ್ರಕರಣ ಸಂಬಂಧ ಚಾಮರಾಜಪೇಟೆ ಠಾಣೆಯಲ್ಲಿ ನಡೆಯುತ್ತಿದ್ದ ಅರುಣ್ ವಿಚಾರಣೆ ಮುಕ್ತಾಯಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಚಾರ ಪಡೆಯಲು ಹಣ ಎಸೆದಿರುವುದಾಗಿ ತಿಳಿದುಬಂದಿದೆ.
ರೀಲ್ಸ್ಗಾಗಿ ಮಾಡಿದ್ದಲ್ಲ, ನನಗೆ ಸ್ವಲ್ಪ ಸಮಯ ಕೊಡಿ ಎಲ್ಲವನ್ನೂ ಹೇಳುತ್ತೇನೆ ಎಂದು ಮಾಧ್ಯಮದ ಮುಂದೆ ಹೇಳಿದ್ದ ಅರುಣ್, ಪೊಲೀಸರ ಮುಂದೆ, “ತಾನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯಲು ಹಣ ಎಸೆದಿದ್ದೆ, ಹೆಚ್ಚು ಲೈಕ್ಸ್ ಹಾಗೂ ಪ್ರಚಾರ ಸಿಗಬೇಕು ಎಂದು ಈ ರೀತಿ ಮಾಡಿದ್ದೇನೆ” ಎಂದು ಬಾಯಿಬಿಟ್ಟಿದ್ದಾನೆ.