newsics.com
ಬೆಂಗಳೂರು: ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 10,000 ಗಿಡ ನೆಡಲು ನಮ್ಮ ಮೆಟ್ರೋ ತೀರ್ಮಾನಿಸಿದೆ.
ಈ ಮೂಲಕ ಪರಿಸರ ಸಂರಕ್ಷಣೆಗೆ ಬದ್ಧತೆ ವ್ಯಕ್ತಪಡಿಸಿದೆ. ಮೆಟ್ರೋ ಕಾಮಗಾರಿ ವೇಳೆ 348 ಮರಗಳನ್ನು ಸ್ಥಳಾಂತರಿಸಲಾಗಿತ್ತು. ಈ ವೇಳೆ 4000 ಗಿಡ ನೆಡುವ ಭರವಸೆಯನ್ನು ಹೈಕೋರ್ಟ್ ಗೆ ನೀಡಲಾಗಿತ್ತು.
ಇದೀಗ ಪರಿಸರ ಸಂರಕ್ಷಣೆ ಖಾತರಿಪಡಿಸಲು 10,000 ಸಸಿಗಳನ್ನು ನೆಡಲು ಮೆಟ್ರೋ ತೀರ್ಮಾನಿಸಿದೆ.