newsics.com
ಚಿತ್ರದುರ್ಗ: ವೀಳ್ಯದೆಲೆ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಹಿಂದೆಂದೂ ಕಾಣದಷ್ಟು ದುಬಾರಿಯಾಗಿದೆ.
ವೀಳ್ಯದೆಲೆ ಇದೀಗ ಒಂದು ಪಿಂಡಿಗೆ 20 ಸಾವಿರದಷ್ಟು ಬೆಲೆಯೇರಿಕೆ ಕಂಡಿದೆ. ಒಂದು ಕಟ್ಟು ವೀಳ್ಯದೆಲೆ ಇನ್ನೂರು ರೂಪಾಯಿವರೆಗೂ ಮಾರಾಟವಾಗುತ್ತಿದೆ. ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಮಳೆ, ಶೀತ ವಾತಾವರಣದಿಂದ ವೀಳ್ಯದೆಲೆಯ ಅಭಾವ ಉಂಟಾಗಿದೆ. ಈ ಬಾರಿ ವೀಳ್ಯದೆಲೆ ಬೆಲೆ ಶಾಕ್ ನೀಡಲು ಕಾರಣವಾಗಿದೆ.
ಸಾಮಾನ್ಯವಾಗಿ ಶುಭ ಸಮಾರಂಭಗಳು ಇರುವ ದಿನಗಳಲ್ಲಿ ವೀಳ್ಯದೆಲೆ ಕಡಿಮೆ ಬೆಲೆಗೆ ಸಿಗುತ್ತಿದ್ದವು. ಈ ವರ್ಷ ಮಳೆಯಿಂದ ತೋಟಗಳು ಹಾಳಾಗಿರುವುದಲ್ಲದೆ, ಎಲೆ ಬಳ್ಳಿಗಳಿಗೆ ನಾನಾ ನಮೂನೆಯ ಕಾಯಿಲೆಗಳು ಸಹ ತಗುಲಿವೆ. ಇದರಿಂದ ಇಳುವರಿ ಕಡಿಮೆಯಾಗಿದೆ. ಹಾಗಾಗಿ ವೀಳ್ಯದೆಲೆಗೆ ಬೆಲೆ ಬಂದರೂ ರೈತರ ಬಳಿಯೂ ವೀಳ್ಯದೆಲೆ ಇಲ್ಲದಂತಾಗಿದೆ.