ಬೀದರ್: ರಾಜ್ಯದಲ್ಲಿ ಕೊರೋನಾ ಸಂಸತ್ ಸದಸ್ಯರ ಮೇಲೆ ದಾಳಿ ನಡೆಸಲು ಆರಂಭಿಸಿದೆ . ಬೀದರ್ ಸಂಸತ್ ಸದಸ್ಯ ಭಗವಂತ ಖೂಬಾ ಅವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ರೋಗದ ಯಾವುದೇ ಲಕ್ಷಣ ಅವರಲ್ಲಿ ಕಂಡು ಬಂದಿಲ್ಲ.
ಭಗವಂತ ಖೂಬಾ ಅವರು ಇದೀಗ ಬೀದರ್ ನ ಶಿವನಗರದಲ್ಲಿರುವ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಜತೆ ಸಂಪರ್ಕಕಕ್ಕೆ ಬಂದಿದ್ದವರು ಕೊರೋನಾ ಪರೀಕ್ಷೆ ನಡೆಸುವಂತೆ ಅವರು ಮನವಿ ಮಾಡಿದ್ದಾರೆ.
ಈ ಮಧ್ಯೆ ರೋಗಿಯೊಬ್ಬರಲ್ಲಿ ಕೊರೋನಾ ಸೋಂಕು ಲಕ್ಷಣ ಕಂಡ ಬಂದ ಕಾರಣ ಕಲಬುರ್ಗಿಯ ಜಯದೇವ ಹೃದ್ರೋಗ ಸಂಸ್ಥೆಯನ್ನು ಸೀಲ್ ಡೌನ್ ಮಾಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಹೇರಲಾಗಿರುವ ಲಾಕ್ ಡೌನ್ ಮುಂದುವರಿದಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.