newsics.com
ಬೆಂಗಳೂರು: ಜೂನ್ ಒಂದರಿಂದ ಬಿಬಿಎಂಪಿ ಪೌರ ಕಾರ್ಮಿಕರಿಗೆ ಬಿಸಿಯೂಟ ಬಂದ್ ಆಗಲಿದೆ.
ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಅದಮ್ಯ ಚೇತನ, ಇಸ್ಕಾನ್ ಸಂಸ್ಥೆಗಳ ಮೂಲಕ ಪೌರ ಕಾರ್ಮಿಕರಿಗೆ ತಿಂಡಿ ಹಾಗೂ ಬಿಸಿಯೂಟ ನೀಡಲಾಗುತ್ತಿತ್ತು. ಆದರೆ, ಈ ಊಟದಲ್ಲಿ ಉಪ್ಪು ಇಲ್ಲ, ಖಾರ ಇಲ್ಲ, ರುಚಿಯಂತೊ ಮೊದ್ಲೆ ಇಲ್ಲ ಅಂತ ಪೌರಕಾರ್ಮಿಕರು ಬಿಬಿಎಂಪಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಯೂಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.
ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಲ್ಲಿ 15,700 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಕಳೆದ 4 ವರ್ಷಗಳಿಂದ ಅದಮ್ಯ ಚೇತನ ಹಾಗೂ ಇಸ್ಕಾಂ ಸಂಸ್ಥೆಗಳ ಮೂಲಕ ಬಿಸಿಯೂಟ ಪೂರೈಕೆ ಮಾಡಲಾಗುತ್ತಿದೆ. ಆಹಾರ ಪೂರೈಕೆಯ ವೆಚ್ಚವನ್ನು ಪಾಲಿಕೆಯೇ ಭರಿಸುತ್ತಿತ್ತು. ಆದರೆ, ಶೇ.30 ರಿಂದ 4೦ ರಷ್ಟು ಪೌರಕಾರ್ಮಿಕರು ಮಾತ್ರ ಊಟ ಮಾಡುತ್ತಿದ್ದು ಉಳಿದ ಆಹಾರ ನಿತ್ಯ ವ್ಯರ್ಥವಾಗುತ್ತಿತ್ತು.
ಈಗ ಇದಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ಹೊಸ ಯೋಜನೆ ಜಾರಿ ಮಾಡಿದೆ. ಬಿಸಿಯೂಟದ ಮೊತ್ತವನ್ನು ಪೌರಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲು ಮುಂದಾಗಿದೆ. ತಿಂಡಿಯ ಹಣ ನೇರವಾಗಿ ಪೌರಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಪ್ಲಾನ್ ಮಾಡಲಾಗಿದೆ. ಬಿಸಿಯೂಟ ಬದಲಿಗೆ ನೇರವಾಗಿ ಪೌರ ಕಾರ್ಮಿಕರ ಅಕೌಂಟ್‌ಗೆ 50 ರೂ ಹಣ ವರ್ಗಾವಣೆ ಮಾಡಲಾಗುತ್ತೆ. ಪ್ರತಿ ಊಟಕ್ಕೆ ಜಿಎಸ್‌ಟಿ ಸೇರಿದಂತೆ ಸುಮಾರು 5೦ ರೂ ನೀಡಲು ಇಲಾಖೆ ನಿರ್ಧರಿಸಿದೆ.
ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಆಡಳಿತಕ್ಕೆ ಬರುತ್ತಿದ್ದಂತೆ ಬಹಳಷ್ಟು ಬದಲಾವಣೆಗೆ ಮುಂದಾಗಿದೆ.