Saturday, April 17, 2021

ರಾಜ್ಯಸಭಾ ಚುನಾವಣೆ: ಬಿಜೆಪಿ ವರಿಷ್ಟರಿಂದ ಅಚ್ಚರಿಯ ಆಯ್ಕೆ

ನವದೆಹಲಿ: ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ವರಿಷ್ಟ ಮಂಡಳಿ ರಾಜ್ಯ ಘಟಕಕ್ಕೆ ಶಾಕ್ ನೀಡಿದೆ, ಬಿಜೆಪಿ ಕೋರ್ ಕಮಿಟಿ ಶಿಫಾರಸು ಮಾಡಿದ ಹೆಸರನ್ನು ಪರಿಗಣಿಸದೇ ತನ್ನದೇ ಆದ ಮಾನದಂಡದಲ್ಲಿ ಇಬ್ಬರ ಹೆಸರನ್ನು ಅಂತಿಮಪಡಿಸಿದೆ.  ಅಶೋಕ್ ಗಸ್ತಿ ಮತ್ತು  ಈರಣ್ಣ ಕಡಾಡಿ ಅವರನ್ನು ಚುನಾವಣಾ ಕಣಕ್ಕಿಳಿಸಲು ಬಿಜೆಪಿ ವರಿಷ್ಟರು ನಿರ್ಧರಿಸಿದ್ದಾರೆ. ಪಕ್ಷ ನಿಷ್ಠೆ ಮತ್ತು ಹಿರಿತನದ ಆಧಾರದಲ್ಲಿ ಈ ಆಯ್ಕೆ ನಡೆದಿದೆ ಎಂದು ವಿಶ್ಲೇಷಿಸಲಾಗಿದೆ. ಅಶೋಕ್ ಗಸ್ತಿ ಅವರು ಸವಿತಾ ಸಮಾಜಕ್ಕೆ ಸೇರಿದವರಾಗಿದ್ದಾರೆ. ಈರಣ್ಣ ಕಡಾಡಿ  ಲಿಂಗಾಯತ ಸಮುದಾಯದವರಾಗಿದ್ದಾರೆ. ಉಮೇಶ್ ಕತ್ತಿ ಅವರು ತಮ್ಮ ಸಹೋದರನಿಗೆ ಟಿಕೇಟ್ ಗಿಟ್ಟಿಸಲು ಪ್ರಬಲ ಲಾಬಿ ನಡೆಸಿದ್ದರು.ಈ ಎಲ್ಲ ಪ್ರಯತ್ನ ಇದೀಗ ವಿಫಲಗೊಂಡಿದೆ

ಮತ್ತಷ್ಟು ಸುದ್ದಿಗಳು

Latest News

ಕುಂಭಮೇಳದ ಪ್ರಧಾನ ಸಾಧು ಕೊರೋನಾಗೆ ಬಲಿ

newsics.com ಹರಿದ್ವಾರ: ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಸಾಧು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ...

ಬೆಂಗಳೂರು ವಿವಿ ಪರೀಕ್ಷೆಗಳು‌ ಮುಂದೂಡಿಕೆ

newsics.com ಬೆಂಗಳೂರು: ಕೊರೋನಾ ಅಬ್ಬರ ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ...

ಪಂಜಾಬ್ ವಿರುದ್ಧ ಚೆನ್ನೈಗೆ ಸುಲಭದ ಗೆಲುವು

newsics.com ಮುಂಬೈ: ಐಪಿಎಲ್ 2021ರ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲರ್ಗಳ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು. ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗೆಲುವು ಗಳಿಸಿದೆ. 106 ರನ್ಗಳ...
- Advertisement -
error: Content is protected !!