newsics.com
ಬೆಂಗಳೂರು: ನಗರದ ವ್ಯಕ್ತಿಗೆ ಆನ್‌ಲೈನ್ ಗೇಮ್ ವೇಳೆ ಪರಿಚಯವಾದ ಮಹಿಳೆಯೊಬ್ಬಳು ಬೆತ್ತಲೆ ವಿಡಿಯೋ ಮೂಲಕ ಬ್ಲ್ಯಾಕ್‌ಮೇಲ್ ಮಾಡಿ 23 ಲಕ್ಷ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಆನ್‌ಲೈನ್ ಗೇಮ್ ಆದ ‘ಕಾಕ್ ಫೈಟ್’ ಆಡುತ್ತಿರುವಾಗ ಪರಿಚಯವಾದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ ಖಾಸಗಿ ಸಂಸ್ಥೆಯ ಉದ್ಯೋಗಿ ಕುಮಾರ್ ಈಗ ಹಣ ಕಳೆದುಕೊಂಡು ಕಂಗಾಲಾಗಿದ್ದಾನೆ. ಕೆ.ಆರ್. ಪುರಂ ನಿವಾಸಿಯಾಗಿರುವ ಈತ ಈಗ ಬೇರೆ ದಾರಿಯಿಲ್ಲದೆ ವೈಟ್‌ಫೀಲ್ಡ್ ಪೊಲೀಸರಿಗೆ ದೂರು ನೀಡಿದ್ದಾನೆ.
28 ವರ್ಷದ ಸಂತ್ರಸ್ತ ಯುವಕ ಸಮಯ ಸಿಕ್ಕಾಗಲೆಲ್ಲಾ ಆನ್‌ಲೈನ್ ಆಟಗಳನ್ನು ಆಡುತ್ತಿದ್ದ. ಆಗಸ್ಟ್ 2022 ರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಧನಲಕ್ಷ್ಮೀ ಎಂದು ಗುರುತಿಸಿಕೊಂಡ ಕುಮಾರ್ ಮಹಿಳೆಯೊಂದಿಗೆ ಸಂಪರ್ಕಕ್ಕೆ ಬಂದ ಎಂದು ಬೆಂಗಳೂರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾನೆ.
ಕೆಲವೇ ತಿಂಗಳುಗಳಲ್ಲಿ, ಆಕೆ ತನ್ನ ಆರ್ಥಿಕ ಸಮಸ್ಯೆಗಳನ್ನು ಹಂಚಿಕೊಂಡಳು ಮತ್ತು ಕುಮಾರ್‌ನಿಂದ 20,000 ರೂ. ಸಾಲವೆಂದು ಪಡೆದಿದ್ದಳು. ನಂತರ, ಆಕೆ ವಾಟ್ಸಾಪ್‌ನಲ್ಲಿ ವಿಡಿಯೋ ಕಾಲ್ ಮಾತನಾಡಿದ್ದಳು. ಈ ವೇಳೆ ಅವಳು ಅರೆಬೆತ್ತಲೆಯಾಗಿ ಕಾಣಿಸಿಕೊಂಡಿದ್ದಳು, ನಂತರ ಬೆಂಗಳೂರಿನ ಉದ್ಯೋಗಿ ಸಹ ತನ್ನ ಬಟ್ಟೆ ತೆಗೆದು ಬೆತ್ತಲೆಯಾಗಿದ್ದಾನೆ. ನಂತರ, ಈ ವಿಡಿಯೋ ರೆಕಾರ್ಡ್ ಮಾಡಿದ ಮಹಿಳೆ ವಿಡಿಯೋ ಲೀಕ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕುನೋ ಪಾರ್ಕ್‌ನಲ್ಲಿ ಮತ್ತೆರಡು ಚೀತಾ ಮರಿ ಸಾವು, ಇನ್ನೊಂದರ ಸ್ಥಿತಿ ಗಂಭೀರ