newsics.com
ಬೆಂಗಳೂರು: ಜೂ.21ರಿಂದ ಷರತ್ತಿನೊಂದಿಗೆ ನಗರದಲ್ಲಿ ಬಿಎಂಟಿಸಿ ಬಸ್ ಸಂಚಾರಕ್ಕೆ ಬಿಬಿಎಂಪಿ ಅನುಮತಿ ನೀಡಿದೆ.
ಮೊದಲ ಹಂತದ ಲಾಕ್ಡೌನ್ ಸಡಿಲಿಕೆ ವೇಳೆ ಸಾರ್ವಜನಿಕ ಸಾರಿಗೆಗೆ ವಿನಾಯಿತಿ ಬೇಡ ಎಂದಿದ್ದ ಬಿಬಿಎಂಪಿ, ಇದೀಗ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಒತ್ತಡ ಕೇಳಿಬಂದ ಕಾರಣ ಸಾರ್ವಜನಿಕ ಸಾರಿಗೆಗೆ ಅವಕಾಶ ನೀಡಿದೆ ಎಂದು ಹೇಳಲಾಗಿದೆ.
ಬಸ್ ಗಳ ಸಂಚಾರಕ್ಕೆ ಷರತ್ತು ವಿಧಿಸಿದ ಬಿಬಿಎಂಪಿ. ಶೇ 50ರಷ್ಟು ಬಸ್ ಗಳು ಮಾತ್ರ ರಸ್ತೆಗಿಳಿಯಬೇಕು, ಶೇ 50ರಷ್ಟು ಪ್ರಯಾಣಿಕರಿಗೆ ಅವಕಾಶ ಹಾಗೂ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ, ಎರಡು ಜನರ ಆಸನಕ್ಕೆ ಒಬ್ಬನೇ ಪ್ರಯಾಣಿಕ ಕುಳಿತ ಪ್ರಯಾಣಿಸುವಂತೆ ಸೂಚಿಸಿದೆ.
ಮೆಜೆಸ್ಟಿಕ್, ಟರ್ಮಿನಲ್ಸ್, ಪ್ರಮುಖ ಬಸ್ ನಿಲ್ದಾಣಗಳಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಿದೆ. ನೈಟ್ ಕರ್ಫ್ಯೂ ಆರಂಭಕ್ಕೂ ಮುನ್ನ ಅಂದರೆ 7 ಗಂಟೆಯೊಳಗೆ ಬಸ್ ಸಂಚಾರ ನಿಲ್ಲಿಸಬೇಕು ಎಂದು ಷರತ್ತು ವಿಧಿಸಿ ಎಂದು ತಿಳಿದುಬಂದಿದೆ.
ಅರಬ್ಬಿ ಸಮುದ್ರದಲ್ಲಿ ನೀರೊಳಗಿನ ನಿಗೂಢ ದ್ವೀಪ ಪತ್ತೆಹಚ್ಚಿದ ಗೂಗಲ್ ಮ್ಯಾಪ್!