newsics.com
ಬೆಂಗಳೂರು: ಬಹು ನಿರೀಕ್ಷಿತ ಬಿಎಂಟಿಸಿಯ ಕನಸಿನ ಯೋಜನೆ ನಿಮ್ಬಸ್ (NIMBUS) ಆ್ಯಪ್ ಕಾರ್ಯರೂಪಕ್ಕೆ ಬರುವ ದಿನ ಹತ್ತಿರವಾಗಿದೆ. ಈ ತಿಂಗಳ ಅಂತ್ಯದಲ್ಲಿ ಇದು ಬಳಕೆದಾರರಿಗೆ ದೊರೆಯುವ ನಿರೀಕ್ಷೆಯಿದೆ.
ರಿಯಲ್ ಟೈಮ್ ನಲ್ಲಿ ಬಸ್ಗಳನ್ನು ಟ್ರ್ಯಾಕ್ ಮಾಡುವುದು ಸೇರಿದಂತೆ ಹಲವು ಫೀಚರ್ ಗಳನ್ನು ಈ ಆ್ಯಪ್ ಹೊಂದಿದೆ. ಈ ಹಿಂದೆ ಡಿಸೆಂಬರ್ 13ರಂದು ಇದರ ಜಾರಿಗೆ ತೀರ್ಮಾನಿಸಲಾಗಿತ್ತು.
ಕೆಲವು ತಾಂತ್ರಿಕ ದೋಷಗಳು ಕಂಡು ಬಂದ ಕಾರಣ ಅದನ್ನು ಪರಿಷ್ಕರಿಸಿ ಇದೀಗ ಪೂರ್ಣ ಮಟ್ಟದಲ್ಲಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು BMTC ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಸೂರ್ಯ ಸೇನ್ ತಿಳಿಸಿದ್ದಾರೆ.
ಇದೇ ವೇಳೆ ಆ್ಯಪ್ ಬಳಕೆ ಮತ್ತು ಅಭಿವೃದ್ದಿಗೆ ನೀಡುವಷ್ಚೇ ಆದ್ಯತೆಯನ್ನು ಸುರಕ್ಷಿತ ಪ್ರಯಾಣಕ್ಕೆ ನೀಡಿ ಎಂಬ ಬೇಡಿಕೆ ಕೂಡ ಬಲಗೊಂಡಿದೆ.
ಬಿಬಿಸಿ ಸಾಕ್ಷ್ಯ ಚಿತ್ರ ವಿರೋಧಿಸಿ ಪ್ರತಿಭಟನೆ: ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು