newsics.com
ಬೆಂಗಳೂರು: ಕೊರೋನಾ ಸೋಂಕಿನ ಭೀತಿ ನಡುವೆಯೂ ರಾಜ್ಯ ರಾಜಧಾನಿಯಲ್ಲಿ ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದೆ.
ಹೊಸ ವರ್ಷಾಚರಣೆ ಸಂಭ್ರಮಕ್ಕೆ ಕಡಿವಾಣ ಹಾಕಿ ಕೊರೋನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಬೆಂಗಳೂರಲ್ಲಿ ಟಫ್ ರೂಲ್ಸ್ ಜಾರಿಗೆ ತರಲು ಮುಂದಾಗಿದೆ. ಕಾಟಾಚಾರದ ನೈಟ್ ಕರ್ಪ್ಯೂ ಹಿಂಪಡೆದಿರುವ ಸರ್ಕಾರ ಟಫ್ ರೂಲ್ಸ್ ಅನ್ನು ಜಾರಿಗೊಳಿಸುವುದು ನಿಶ್ಚಿತ ಎನ್ನಲಾಗುತ್ತಿದೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ನಗರದಲ್ಲಿ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ನಿನ್ನೆ ಗೃಹಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದರು.
ನಗರದ ಎಂ.ಜಿ.ರೋಡ್, ಬ್ರಿಗೇಡ್ ರಸ್ತೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಾಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. 1 ದಿನದ ಮಟ್ಟಿಗೆ 144 ಸೆಕ್ಷನ್ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸ
ದೇಶದಲ್ಲಿ ಒಂದೇ ದಿನ 22272 ಮಂದಿಗೆ ಕೊರೋನಾ ಸೋಂಕು, 251 ಬಲಿ
ಹೊಸ ಕೊರೋನಾ ವೈರಸ್’ನಿಂದ ನಿರೀಕ್ಷೆ ಮೀರಿ ಹೆಚ್ಚಲಿದೆ ಸಾವು- ಅಧ್ಯಯನ
ಸೂಪರ್ ಸ್ಟಾರ್ ರಜನಿಕಾಂತ್ ಅಸ್ವಸ್ಥ; ಆಸ್ಪತ್ರೆಗೆ ದಾಖಲು