ಮೈಸೂರು: ರಸ್ತೆಯಲ್ಲಿ ವೀಲಿಂಗ್ ವಿರೋಧಿಸಿದ್ದಕ್ಕೆ ಗುಂಪೊಂದು ಯುವಕನನ್ನು ಹತ್ಯೆ ಮಾಡಿದೆ. ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೇತುಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಗ್ರಾಮದ ರಸ್ತೆಗಳು ಕಿರಿದಾಗಿವೆ. ಇಲ್ಲಿ ವೀಲಿಂಗ್ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಸಿದ್ದರಾಜು ಯುವಕರಿಗೆ ಸಲಹೆ ನೀಡಿದ್ದ. ಇದು ಮಾತಿಕ ಚಕಮಕಿಗೆ ಕಾರಣವಾಗಿತ್ತು. ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
ಇದೇ ಸಿಟ್ಟಿನಲ್ಲಿ ಯುವಕರ ಗುಂಪು ಸಿದ್ದರಾಜು ಅವರನ್ನು ಹೊಡೆದು ಹತ್ಯೆ ಮಾಡಿದೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.