ದೆಹಲಿ:
ಅನರ್ಹ ಶಾಸಕರ ಕುರಿತು ಕರ್ನಾಟಕ ಸಿಎಂ ಬಿಎಸ್ ಯಡಿಯೂರಪ್ಪ ನೀಡಿರುವ ಹೇಳಿಕೆಯನ್ನು ವಿಚಾರಣೆಗೆ ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ.
ನ್ಯಾ.ರಮಣ್ ನೇತೃತ್ವದ ಪೀಠ ಮಂಗಳವಾರ ಶಾಸಕರ ಅನರ್ಹತೆ ಕುರಿತ ವಿಚಾರಣೆ ಕೈಗೆತ್ತಿಕೊಂಡ ವೇಳೆ ಈ ವಿಷಯ ತಿಳಿಸಿದೆ.
ಈಗ ಅನರ್ಹರಾಗಿರುವ ಶಾಸಕರಿಂದ ರಾಜೀನಾಮೆ ಕೊಡಿಸಿ ತಪ್ಪು ಎಂದು ಈಗ ಅನಿಸುತ್ತಿದೆ. ಇದಕ್ಕೆ ಬಿಜೆಪಿ ನಾಯಕರ ವರ್ತನೆಯೇ ಕಾರಣ ಎಂಬರ್ಥದಲ್ಲಿ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದಿದ್ದ ಉಪ ಚುನಾವಣೆ ಪೂರ್ವಸಿದ್ಧತಾ ಸಭೆಯಲ್ಲಿ ಯಡಿಯೂರಪ್ಪ ಹೇಳಿದ್ದರು. ಬಿಎಸ್ವೈ ಅವರ ಈ ಮಾತು ಬಹಿರಂಗಗೊಂಡಿದ್ದರಿಂದ, ಇದೇ ಆಡಿಯೋವನ್ನು ಕಾಂಗ್ರೆಸ್ ಸೋಮವಾರ ಸುಪ್ರೀಂಗೆ ಸಲ್ಲಿಸಿತ್ತು.