ಬೆಂಗಳೂರು: ಅತಿಥಿ ಉಪನ್ಯಾಸಕರ ವೇತನಕ್ಕೆ ಆಗ್ರಹಿಸಿ ವಿಧಾನ ಪರಿಷತ್‍ನಲ್ಲಿ ಸದಸ್ಯ ಆಯನೂರು ಮಂಜುನಾಥ್ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಶೀಘ್ರದಲ್ಲೇ ರಾಜ್ಯದ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿಸುವುದಾಗಿ ಸಿಎಂ ಬಿಎಸ್‍ವೈ ಘೋಷಿಸಿದ್ದಾರೆ.
ಸರ್ಕಾರದ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 14447 ಉಪನ್ಯಾಸಕರಿಗೆ ಸಧ್ಯದಲ್ಲೇ ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬಿಎಸ್‍ವೈ ಮಂಗಳವಾರ ಪರಿಷತ್‍ನಲ್ಲಿ ಘೋಷಿಸಿದ್ದಾರೆ.
ಲಾಕ್‍ಡೌನ್‍ನಿಂದಾಗಿ ರಾಜ್ಯದಲ್ಲಿ ಕಾಲೇಜುಗಳ ಬಾಗಿಲು ಮುಚ್ಚಿದೆ. ಮಾರ್ಚ ತಿಂಗಳವರೆಗೆ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿಸಲಾಗಿದೆ. ಏಪ್ರಿಲ್‍ನಿಂದ ಅಗಸ್ಟವರೆಗಿನ ವೇತನ ಬಾಕಿ ಇದೆ. ಈಗ ಬಾಕಿ ವೇತನವನ್ನು ಬಿಡುಗಡೆಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ. ಆರ್ಥಿಕ ಇಲಾಖೆಗೆ ಸಿಎಂ ಸೂಚನೆ ನೀಡಿರುವುದನ್ನು ಘೋಷಿಸುತ್ತಿದ್ದಂತೆ ಸದಸ್ಯ ಆಯನೂರು ಮಂಜುನಾಥ್ ಹಾಗೂ ಕಾಂಗ್ರೆಸ್,ಜೆಡಿಎಸ್ ಸದಸ್ಯರು ತಮ್ಮ ಧರಣಿ ಹಿಂಪಡೆದಿದ್ದಾರೆ.
ರಾಜ್ಯದ ಅತಿಥಿ ಉಪನ್ಯಾಸಕರಿಗೆ ಸಿಹಿಸುದ್ದಿ ನೀಡಿದ ಸಿಎಂ ಬಿಎಸ್‍ವೈ
Follow Us