Saturday, October 16, 2021

ಆರೂವರೆ ಕೋಟಿ‌ ರೂ. ಮೌಲ್ಯದ ಬೆಂಟ್ಲಿ ಬೆಂಟಾಯ್ಗಾ ಕಾರು ಖರೀದಿಸಿದ ಉದ್ಯಮಿ ರೋಹನ್

Follow Us

newsics.com

ಬೆಂಗಳೂರು: ರಿಯಲ್ ಎಸ್ಟೇಟ್ ಕಂಪನಿಯಾದ ರೋಹನ್ ಕಾರ್ಪೊರೇಷನ್‍ನ ಮಾಲೀಕ, ಪ್ರಸಿದ್ಧ ಉದ್ಯಮಿ ರೋಹನ್ ಮೊಂತೇರೊ ರಾಜ್ಯದಲ್ಲಿ ಮೊದಲ ಬೆಂಟ್ಲಿ ಬೆಂಟಾಯ್ಗಾ ಕಾರು ಖರೀದಿಸಿದ್ದಾರೆ.
ಈ ಐಷಾರಾಮಿ ಬೆಂಟ್ಲಿ ಬೆಂಟಾಯ್ಗಾ ಕಾರಿನ ಬೆಲೆ ಸುಮಾರು ರೂ.6.5 ಕೋಟಿಯಾಗಿದೆ. ಈ ಕಾರಿನ ಬೇಸ್ ಮಾಡೆಲ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.1 ಕೋಟಿಯಾಗಿದೆ.
ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬೆಂಟ್ಲಿ ತನ್ನ 2021ರ ಬೆಂಟಾಯ್ಗಾ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತಿಚೆಗೆ ಬಿಡುಗಡೆಗೊಳಿಸಿತ್ತು. ಬೆಂಟ್ಲಿ ಬೆಂಟಾಯ್ಗಾ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಐಷಾರಾಮಿ ಎಸ್‍ಯುವಿಗಳಲ್ಲಿ ಒಂದಾಗಿದೆ.
ಬೆಂಟ್ಲಿ ಬೆಂಟಾಯ್ಗಾ ವಿ8 ಫಸ್ಟ್‌ ಎಡಿಷನ್ ಈ ಮಾದರಿಯಲ್ಲಿ ಅತ್ಯಂತ ಹೊಸ ಎಕ್ಸ್‌ಕ್ಲ್ಯೂಸಿವ್ ಮಾಡೆಲ್ ಆಗಿದೆ.

ಇಂಗ್ಲೆಂಡ್‍ನ ಬೆಂಟ್ಲಿ ಮೋಟರ್ಸ್‌ನ ಕಾರುಗಳನ್ನು ಹೆಚ್ಚಾಗಿ ರಾಜ ಮನೆತನದವರು, ಭಾರೀ ಉದ್ಯಮಿಗಳು, ಪ್ರಭಾವಿ ಹುದ್ದೆಗಳಲ್ಲಿರುವ ರಾಜಕಾರಣಿಗಳು ಬಳಸುತ್ತಾರೆ.

ಜನರಿಂದಲೇ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆ: ಸಚಿವ ಸುನಿಲ್’ಕುಮಾರ್

ವಿದ್ಯಾರ್ಥಿಯಾಗಿದ್ದಾಗ ಟೀ ಮಾರುತ್ತಿದ್ದ ಬಾರಾಮತಿಯ ಬಾಲಕ ಈಗ ಐಪಿಎಸ್ ಅಧಿಕಾರಿ!

ಇಂದಿನಿಂದ ಅಮೆಜಾನ್, ನೆಟ್’ಫ್ಲಿಕ್ಸ್ ನಲ್ಲಿ ‘ತಲೈವಿ’ ಸಿನಿಮಾ ಲಭ್ಯ

ತಮಿಳುನಾಡಿನ ಮೀನುಗಾರರ ಮೇಲೆ ಶ್ರೀಲಂಕಾ ತಂಡದಿಂದ ಹಲ್ಲೆ, ದರೋಡೆ

ವಸತಿ ನಿಲಯದ ಆರು ವಿದ್ಯಾರ್ಥಿನಿಯರಲ್ಲಿ ಕೊರೋನಾ ಸೋಂಕು, ಕಟ್ಟಡ ಸೀಲ್ ಡೌನ್

ಮತ್ತಷ್ಟು ಸುದ್ದಿಗಳು

Latest News

3 ದಿನ ಉಚಿತ ಪೆಟ್ರೋಲ್ ನೀಡಿದ ಬಂಕ್ ಮಾಲೀಕ

newsics.com ಮಧ್ಯ ಪ್ರದೇಶ: ಇಲ್ಲಿನ ಬೆತುಲ್ ಜಿಲ್ಲೆಯಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ತನ್ನ ಗ್ರಾಹಕರಿಗೆ 3 ದಿನ ಉಚಿತ ಪೆಟ್ರೋಲ್ ನೀಡಿದ್ದಾರೆ. ದೀಪಲ್ ಸೈನಾನಿ ಎಂಬುವವರು ಹೆಣ್ಣು ಮಗು...

ರಾಜ್ಯದಲ್ಲಿ ಹೊಸದಾಗಿ 264 ಕೊರೋನಾ ಪ್ರಕರಣ ಪತ್ತೆ, 421 ಮಂದಿ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 264 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,83,133ಕ್ಕೆ ಏರಿಕೆಯಾಗಿದೆ. 421 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 29,35,659 ಜನ ಚೇತರಿಸಿಕೊಂಡಿದ್ದಾರೆ. 6 ಸೋಂಕಿತರು...

ಲಸಿಕೆ ನೀಡಲು ಅಪಾಯಕಾರಿ ಬಿದಿರಿನ ಸೇತುವೆ ದಾಟಿದ ಆರೋಗ್ಯ ಕಾರ್ಯಕರ್ತ: ವಿಡಿಯೋ ವೈರಲ್

newsics.com ಅರುಣಾಚಲ ಪ್ರದೇಶ: ಇಲ್ಲಿನ ಆರೋಗ್ಯ ಕಾರ್ಯಕರ್ತರೊಬ್ಬರು ಜನರಿಗೆ ಕೋವಿಡ್ -19 ವಿರುದ್ಧ ಲಸಿಕೆ ನೀಡಲು ಬಿದಿರಿನ ಸೇತುವೆ ದಾಟಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅವರು ತಾತ್ಕಾಲಿಕವಾಗಿ ನಿರ್ಮಿಸಿದ ಅಪಾಯಕಾರಿ ಬಿದಿರಿನ ಸೇತುವೆ...
- Advertisement -
error: Content is protected !!